ಕೇಂದ್ರ ಸರ್ಕಾರದ ಸಾಧನೆ ಜನರ ಮುಂದಿಡಿ

14Manju5
ತಾರಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಮಂಗಲ ಅಂಗಡಿ ಚಾಲನೆ ನೀಡಿದರು. ಈರಣ್ಣ ಕಡಾಡಿ, ಸಂಜಯ ಪಾಟೀಲ, ಧನಂಜಯ ಜಾಧವ, ಪುಂಡಲೀಕ ನಾಯಿಕ, ಗಜಾನನ ನಾಯಿಕ, ಸಿದ್ದಯ್ಯ ಅಡಿವೆಪ್ಪನಮಠ ಇತರರಿದ್ದರು.
Published on

ಬೆಳಗಾವಿ: ಕೇಂದ್ರ ಸರ್ಕಾರದ ಹೊಸ ಹೊಸ ಕಾರ್ಯಕ್ರಮಗಳನ್ನು ಜನರ ಮುಂದಿಡಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಬಿಜೆಪಿ ಗ್ರಾಮೀಣ ಘಟಕ ಗುರುವಾರ ಹಮ್ಮಿಕೊಂಡಿದ್ದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಏಕತೆ ಸಂಕೇತವಾಗಿ ಸಹಸ್ರಾರು ಪುಣ್ಯ ಸ್ಥಳಗಳ ಮಣ್ಣನ್ನು ಸಂಗ್ರಹಿಸಿ ದೆಹಲಿಯಲ್ಲಿನ ವೀರಯೋಧರ ಅಮತವಾಟಿಕಾ ವನದಲ್ಲಿ ಸೇರಿಸುವ ಅಭಿಯಾನ ಇದಾಗಿದೆ ಎಂದರು. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಲಾಭವನ್ನು ಜನರು ಪಡೆದುಕೊಳ್ಳಬೇಕು ಎಂದರು. ಸಂಸದೆ ಮಂಗಲ ಅಂಗಡಿ, ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ , ಜಯಪ್ರಕಾಶ, ಯುವರಾಜ ಜಾಧವ, ಗಜಾನನ ನಾಯಿಕ, ಲಕ್ಷ್ಮೀ ಮಾಸ್ತಮರ್ಡಿ, ಪುಂಡಲೀಕ ನಾಯಿಕ, ಗಜಾನನ ನಾಯಿಕ, ಸಿದ್ದಯ್ಯ ಅಡಿವೆಪ್ಪನಮಠ, ಲಿಂಗರಾಜ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net