ಕೇಂದ್ರೀಯ ವಿವಿಯಲ್ಲಿ ಸರಸ್ವತಿ ಪೂಜೆಗೆ ಅಡ್ಡಿ

Cuk crime
Published on

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬುಧವಾರ ಬೆಳಗ್ಗೆ ಸರಸ್ವತಿ ಪೂಜೆ ಸಂಬoಧ ಎರಡು ವಿದ್ಯಾರ್ಥಿ ಗುಂಪುಗಳ ಮಧ್ಯೆ ಗಲಾಟೆಯಾಗಿ ಪೊಲೀಸರ ಮಧ್ಯಸ್ಥಿಕೆಯಿಂದ ಶಾಂತವಾದ ಘಟನೆ ವರದಿಯಾಗಿದೆ.
ಬುಧವಾರ ಸಿಯುಕೆ ಗ್ರಂಥಾಲಯ ಹಾಗೂ ಎಜುಕೇಶನ್ (ಬಿ.ಇಡಿ) ವಿಭಾಗದಲ್ಲಿ ವಸಂತ ಪಂಚಮಿ ನಿಮಿತ್ತ ಸರಸ್ವತಿ ಹಾಗೂ ಗಣೇಶ ಪೂಜೆ, ಹವನ ಹೋಮ ಮಾಡುತ್ತಿರುವಾಗ ಅಲ್ಲಿಗೆ ತೆರಳಿದ ಭಿನ್ನ ವಿಚಾರಧಾರೆಯ ಸಂಘಟನೆ ಸದಸ್ಯರು ಪೂಜೆ, ಹೋಮ ಮಾಡುವುದು ಅಧಿಕೃತವೇ ಎಂದು ಪ್ರಶ್ನಿಸಿ, ತಡೆಯಲು ಯತ್ನಿಸಿದ್ದಾರೆ. ಇನ್ನೊಮ್ಮೆ ಪೂಜೆ ಮಾಡಿದ್ರೆ ಕೇಸ್ ಹಾಕ್ತೇವೆ ಎಂದು ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ಉಪನ್ಯಾಸಕರೊಂದಿಗೆ ಜೋರು ಧ್ವನಿಯಲ್ಲಿ ಮಾತನಾಡಿದ್ದು, ಕೂಗಾಟ ಚೀರಾಟ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಸ್ಥಳದಲ್ಲಿದ್ದ ಎಬಿವಿಪಿ ಸಂಘಟನೆಗೆ ಸೇರಿದ ಹಲವು ವಿದ್ಯಾರ್ಥಿಗಳು ಅವರನ್ನು ತಡೆಯಲು ಯತ್ನಿಸಿz್ದÁರೆ. ಆಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದೆ. ವಿಷಯ ತಿಳಿದು ನರೋಣಾ ಪೊಲೀಸರು ಸ್ಥಳಕ್ಕೆ ಧಾವಿಸಿz್ದÁರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸಲು ಯತ್ನಿಸಿದ್ದು, ಪರಿಸ್ಥಿತಿ ಶಾಂತವಾಗಿದೆ. ಸದ್ಯ ಸಿಯುಕೆ ಆವರಣದಲ್ಲಿ ಶಾಂತಿ ಕಾಯ್ದುಕೊಳ್ಳಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.
ಮರುಕಳುಹಿಸುತ್ತಿರುವ ಘಟನೆಗಳು: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿವೆ. ಈ ಹಿಂದೆ ಸರಸ್ವತಿ ಮೂರ್ತಿ ಪ್ರತಿಷ್ಠಾಪಿಸಿದ್ದಕ್ಕೆ ಪ್ರತಿಯಾಗಿ ವಿವಿ ಆಡಳಿತ ಕಚೇರಿ ಎದುರು ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ, ಬಣ್ಣ ಬಳಿಯುವ ವಿಚಾರ, ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಕಸದ ಬುಟ್ಟಿಗೆ ಅಂಟಿಸಿ ಅವಮಾನ ಮಾಡಲಾಗಿತ್ತು. ಜಿಲ್ಲೆಯ ಕೆಲ ಸಂಘಟನೆಯವರು ವಿಶ್ವವಿದ್ಯಾಲಯದ ಹೊರಗಿನ ಬೀದಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net