

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ವಿಫುಲವಾದ ಅವಕಾಶಗಳಿದ್ದು ಈ ಪ್ರದೇಶದ ಅಭಿವೃದ್ದಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವಿಸ್ತೃತ ಯೋಜನಾ ವರದಿ ತಯಾರಿಸಿ ಸಲ್ಲಿಸುವಂತೆ
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೂಚಿಸಿದರು.
ಅವರು ಬುಧವಾರ ಕಾರವಾರದ ಕದಂಬ ನೌಕಾನಲೆಯಲ್ಲಿ 5 ನೇ ಶತಮಾನದಲ್ಲಿದ್ದ ಪುರಾತದ ಹಡಗಿನ ಮರು ಸೃಷ್ಠಿಯಾದ
ಐಎನ್‌ಎಸ್ ಕೌಂಡಿನ್ಯ ಗೆ ಚಾಲನೆ ನೀಡಿ ಮಾತನಾಡಿದರು.
ಗೋಕರ್ಣದಲ್ಲಿ ಆಕರ್ಷಕ ಬೀಚ್ ಮತ್ತು ಇಲ್ಲಿನ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಸ್ಥಾನವನ್ನು ಒಳಗೊಂಡು ಈ ಭಾಗದ
ಸಮಗ್ರ ಅಭಿವೃಧ್ದಿಗಾಗಿ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸಿದ್ದಲ್ಲಿ ಈ ಪ್ರದೇಶಕ್ಕೆ ದೇಶದ ಎಲ್ಲಾ ಭಾಗಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ
ಪ್ರವಾಸಿಗರೂ ಆಗಮಿಸಿ, ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಲು ಮತ್ತು ತಮ್ಮ ಭಕ್ತಿಯನ್ನು ತೋರ್ಪಡಿಸಲು ಅನುಕೂಲವಾಗಲಿದೆ
ಎಂದರು.
ಸAಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಿಲ್ಲೆಯ ಜನ ಸಮೂದಯದ ವೈವಿಧ್ಯತೆ ಮತ್ತು ಸಂಸ್ಕೃತಿ ವೈವಿದ್ಯತೆ ಮತ್ತು
ಪ್ರವಾಸೋದ್ಯಮದಲ್ಲಿನ ವಿಫುಲವಾದ ಅವಕಾಶಗಳ ಕುರಿತು ಕೇಂದ್ರ ಸಚಿವರಿಗೆ ಮನದಟ್ಟಣೆ ಮಾಡಲಾಗಿದ್ದು, ಈ ಬಗ್ಗೆ ಅದಷ್ಟು ಶೀಘ್ರದಲ್ಲಿ ರಾಜ್ಯ
ಸರ್ಕಾರ ಡಿ.ಪಿ.ಆರ್ ಮಾಡಿ ಕೆಂದ್ರ ಸರ್ಕಾರಕ್ಕೆ ಕಳುಹಿಸಿದ್ದಲ್ಲಿ ಗೋಕರ್ಣ, ಬನವಾಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ
ಸಹಕಾರವಾಗಲಿದೆ ಇದಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ಅನುಮೋದನೆ ಸೇರಿದಂತೆ ಎಲ್ಲಾ ರೀತಿಯಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು
ಎಂದರು.