

ಸಿಂಧನೂರು: ತಾಲೂಕಿನ ವಿವಿಧ ಗ್ರಾಪಂಗಳಿಗೆ ಕೇಂದ್ರದ ಎಂಒಆರ್‌ಡಿ ತಂಡ ಗುರುವಾರ ಭೇಟಿ ನೀಡಿ, ಪರಿಶೀಲಿಸಿತು.
ತಾಲೂಕಿನ ಆರ್.ಎಚ್.ಕ್ಯಾಂಪ್, ಎಲೆಕೂಡ್ಲಿಗಿ, ಮುಕ್ಕುಂದಾ ಪಂಚಾಯಿತಿಗಳಿಗೆ ತೆರಳಿ ಕೇಂದ್ರ ಸರ್ಕಾರದ ವಸತಿ ಯೋಜನೆ ಫಲಾನುಭವಿಗಳಿಂದ ಮಾಹಿತಿ ಪಡೆದು ಕಡತಗಳನ್ನು ಪರಿಶೀಲಿಸಿದರು. ನಂತರ ಅಂಗವಿಕಲರು, ವಿಧವೆಯರು ಹಾಗೂ ವೃದ್ಧಾಪ್ಯ ವೇತನ ಸರಿಯಾಗಿ ಬರುತ್ತಿದೆಯೇ ಎಂಬುದರ ಕುರಿತು ಫಲಾನುಭವಿಗಳನ್ನು ಕೇಳಿ ತಿಳಿದುಕೊಂಡರು.
ನರೇಗಾ ಕೂಲಿ ಕಾರ್ಮಿಕರ ಜತೆ ಸೌಲಭ್ಯಗಳ ಕುರಿತು ವಿಚಾರಣೆ ನಡೆಸಿದರು. ಉದ್ಯೋಗ ಚೀಟಿ ಪರಿಶೀಲಿಸಿ ಉದ್ಯೋಗದ ವಿವರವನ್ನು ನಮೂದಿಸಬೇಕೆಂದು ಸಿಬ್ಬಂದಿಗೆ ತಿಳಿಸಿದರು. ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರು ಸಾವಿಗೀಡಾದರೆ ನೀಡುತ್ತಿದ್ದ ಅಪಘಾತ ವಿಮೆ ಮೊತ್ತವನ್ನು 2 ಲಕ ್ಷರೂ.ದಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಮುಕ್ಕುಂದಾ ಗ್ರಾಪಂ ವ್ಯಾಪ್ತಿಯ ಸಾಮಾಜಿಕ ಅರಣ್ಯೀಕರಣ ಕಾಮಗಾರಿ ಪರಿಶೀಲಿಸಿ ಸಸಿಯನ್ನು ನೆಟ್ಟು ನೀರೆರೆದರು. ಕೇಂದ್ರ ತಂಡದ ಯೋಜನಾ ನಿರ್ದೇಶಕರಾದ ಡಾ.ರಮೇಶ ಬಾಬು, ಕೃಷ್ಣಕುಮಾರಿ, ತಾಪಂ ಇಒ ಚಂದ್ರಶೇಖರ, ಸಹಾಯಕ ನಿರ್ದೇಶಕ ಅಮರಗುಂಡಪ್ಪ, ಅಧ್ಯಕ ್ಷಎಂ.ರಹೆಮತ್ ಪಾಷಾ ಇದ್ದರು.