ಶ್ರುತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ

shruthi 2
ಶ್ರುತಿ ಬಿ.ಆರ್.
Published on

ಚಿಕ್ಕಮಗಳೂರು: ಕೆಎಎಸ್ ಅಧಿಕಾರಿ, ಬೀರೂರು ಮೂಲದ ಶ್ರುತಿ ಬಿ.ಆರ್. ಅವರ ಮೊದಲ ಕೃತಿ ಜೀರೋ ಬ್ಯಾಲನ್ಸ್ ಕವನ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಕೆೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುವಾಗಲೇ ಶ್ರುತಿ ಅವರು ತಮ್ಮ ಕಾರ್ಯದೊತ್ತಡದ ನಡುವೆಯೂ ಜೀರೋ ಬ್ಯಾಲನ್ಸ್ ಕವನ ಸಂಕಲನ ರಚಿಸಿದ್ದರು. ಬೀರೂರು ಮೂಲದ ರವೀಂದ್ರ ಹಾಗೂ ರೇಣುಕಾ ದಂಪತಿಯ ಪುತ್ರಿ ಶ್ರುತಿ ಅವರಿಗೆ ಅಜ್ಜಿಯಿಂದ ಓದುವ ಹವ್ಯಾಸ ಬೆಳೆದಿತ್ತು. ಜತೆಗೆ ತಂದೆಯ ಅಕ್ಕ ಸರೋಜಮ್ಮ ಅವರು ಆರೇಳು ಪುಸ್ತಕಗಳನ್ನೂ ಬರೆದಿದ್ದರು. ಇದು ಶ್ರುತಿ ಅವರ ಮೇಲೆ ಪರಿಣಾಮ ಬೀರಿತ್ತು. ಜತೆಗೆ ಜಿಪಂ ಉಪಕಾರ್ಯದರ್ಶಿಯಾಗಿದ್ದ ತಂದೆ ರವೀಂದ್ರ ಅವರು ಮಗಳ ಸಾಹಿತ್ಯಾಸಕ್ತಿಗೆ ನೀರೆರೆದಿದ್ದರು.
ಚಿಕ್ಕಂದಿನಿAದಲೂ ಓದುವ ಹವ್ಯಾಸ ಹೊಂದಿದ್ದ ಶ್ರುತಿ ಅವರು ಬಳಿಕ ಬರವಣಿಗೆಯನ್ನೂ ಆರಂಭಿಸಿದ್ದರು. ಆದರೆ ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ಬರೆದ ಲೇಖನಗಳು ಹಾಗೂ ಕವನಗಳು ಎಲ್ಲೂ ಪ್ರಕಟವಾಗಿರಲಿಲ್ಲ. ಆದರೂ ಶ್ರುತಿ ತಮ್ಮ ಓದುವ ಹಾಗೂ ಬರೆಯುವ ಹವ್ಯಾಸ ಮುಂದುವರಿಸಿದ್ದರು.
ಶ್ರುತಿ ಅವರು ಜಿಎಸ್‌ಟಿ ಅಸಿಸ್ಟೆಂಟ್ ಕಮಿಷನರ್ ಆದರ್ಶ ಎಂಬುವರನ್ನು ವಿವಾಹವಾಗಿದ್ದಾರೆ. ಪತಿ ಹಾಗೂ ಅವರ ಮನೆಯವರ ಸಹಕಾರದಿಂದಲೇ ನನಗೆ ಕವನ ಸಂಕಲನ ರಚಿಸಲು ಸಾಧ್ಯವಾಯಿತು. ನನ್ನ ಅತ್ತೆ ವೀಣಾ ಶಿವಮೂರ್ತಿ ಅವರೇ ನನ್ನ ಕವನ ಸಂಕಲನವನ್ನು ಪಬ್ಲಿಷ್ ಮಾಡಿರುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಕೆಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿz್ದÁರೆ. ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಪ್ರಥಮ ರ‍್ಯಾಂಕ್ ಮತ್ತು ಐದು ಚಿನ್ನದ ಪದಕಗಳೊಂದಿಗೆ ಅರ್ಥಶಾಸ್ತçದಲ್ಲಿ ಸ್ನಾತಕೋತ್ತರ ಪದವಿ, ೨೦೧೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತçದಲ್ಲಿ ಪಿಎಚ್.ಡಿ ಪದವಿ ಪಡೆದಿz್ದÁರೆ. ಅವರ ಹಲವು ಲೇಖನಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net