

ವಿಶೇಷ ವರದಿ
ತುಮಕೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನೂತನ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆಗೆ ಮಹೂರ್ತ ಫಿಕ್ಸ್ ಆಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಅಧಿಕೃತ ಕಚೇರಿಯನ್ನು ಆ.18 ರಂದು ಬೆಳಗ್ಗೆ 9ಕ್ಕೆ ಲೋಕಾರ್ಪಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಬಿಜೆಪಿ&ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ.
ಪ್ರವಾಸಿ ಮಂದಿರದ 4 ಕೊಠಡಿಗಳನ್ನೊಳಗೊಂಡ ಹಳೇ ಸಕ್ಯೂರ್ಟ್ ಹೌಸ್ ಅನ್ನು ಬರೋಬ್ಬರಿ 15 ಲಕ್ಷ ರೂ., ವೆಚ್ಚದಲ್ಲಿ ನವೀಕರಣ ಮಾಡಲಾಗಿದ್ದು ಭಾನುವಾರ ಬೆಳಗ್ಗೆ ವಿಶೇಷ ಪೂಜೆಯೊಂದಿಗೆ ಸೋಮಣ್ಣ ನೂತನ ಕಚೇರಿ ಪ್ರವೇಶಿಸಲಿದ್ದಾರೆ. ಸಂಸದರ ಪ್ರತ್ಯೇಕ ಕಚೇರಿ, ಶೌಚಾಗೃಹ, ಸಹಾಯಕ ಸಿಬ್ಬಂದಿಗೆ ಪ್ರತ್ಯೇಕ ಕಚೇರಿ ಸೇರಿದಂತೆ ಸುಸಜ್ಜಿತ ಕಚೇರಿ ಸುಣ್ಣಬಣ್ಣ, ನವೀಕರಣದೊಂದಿಗೆ ತಲೆ ಎತ್ತಿದೆ.
ಪರಂ ರೆಡ್ ಸಿಗ್ನಲ್!: ಕೇಂದ್ರ ರೈಲ್ವೆ ಖಾತೆ ಸಚಿವ ಸೋಮಣ್ಣ ಪ್ರವಾಸಿ ಮಂದಿರದಲ್ಲಿ ಜನಸಂಪರ್ಕ ಕಾರ್ಯಾಲಯ ಆರಂಭಿಸಲು ಕಾಂಗ್ರೆಸ್ ಕಾರ್ಯಕರ್ತರ ಇರಾದೆಯಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮೌಖಿಕ ಸೂಚನೆ ರವಾನಿಸಿದ್ದರು. ಪರಂ ಅಸಮಾಧಾನದ ಬಳಿಕ ಸಕ್ಯೂರ್ಟ್ ಹೌಸ್ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್ ನಂತರ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಧ್ಯಪ್ರವೇಶದೊಂದಿಗೆ ಮತ್ತೆ ಕಾಮಗಾರಿ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿದ್ದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತುಮಕೂರಿನಲ್ಲಿ ಮನೆ ಖರೀದಿಸಿದ್ದ ವಿ.ಸೋಮಣ್ಣ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾದ ನಂತರ ಸರ್ಕಾರದ ಅಧಿಕೃತವಾದ ಕಚೇರಿಯನ್ನು ಪಡೆದಿದ್ದಾರೆ. ಅದರಲ್ಲು ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವುದರಿಂದ ರೈಲ್ವೆ ನಿಲ್ದಾಣದ ಸನಿಹವೇ ಇರುವ ಪ್ರವಾಸಿಮಂದಿರದಲ್ಲೇ ಜನಸಂಪರ್ಕ ಕಾರ್ಯಾಲಯ ಆರಂಭಿಸಿರುವುದು ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಂತಾಗಿದೆ.
1940ರಲ್ಲಿ ನಿರ್ಮಿಸಿದ್ದ ಸಕ್ಯೂರ್ಟ್ ಹೌಸ್
ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿನ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದ ಆವರಣದಲ್ಲಿ 1940ರಲ್ಲಿ ನಿರ್ಮಿಸಿದ್ದ 4 ಕೊಠಡಿಗಳೊಂದಿದ್ದ 240 ಚ.ಮೀ., ಅಳತೆಯ ಹಳೇ ಸಕ್ಯೂರ್ಟ್ ಹೌಸ್ ಕಟ್ಟಡವನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣರ ಹಾಗೂ ಸಂಸದರ ಅವಧಿ ಮುಗಿಯುವವರೆಗೆ ಕಚೇರಿ ಉಪಯೋಗಕ್ಕೆ ನೀಡಲು ಅನಮೋದನೆ ನೀಡಿ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪರವಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜಿ.ರಾಜಶೇಖರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸುಸಜ್ಜಿತ ಜನಸಂಪರ್ಕ ಕಾರ್ಯಾಲಯದಲ್ಲಿ ಕಂಪ್ಯೂಟರ್, ಪ್ರಿಂಟರ್, ಸ್ಕಾ$ನರ್, ೋನ್ ಸೇರಿದಂತೆ 15 ಲಕ್ಷ ರೂ. ವೆಚ್ಚದಲ್ಲಿ ಸಂಸದರ ಕಚೇರಿ ನವೀಕರಣ ಹಾಗೂ ಪೀಠೋಪಕರಣಗಳಿಗೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಅದೇಶದಂತೆ ಲೋಕೋಪಯೋಗಿ ಇಲಾಖೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೆ, ಕೆಲವು ವ್ನಿಗಳು ಎದುರಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಪ್ರಭಾವ ಬೀರಿದ ಸೋಮಣ್ಣರು ಕೊನೆಗೂ ಐಬಿನಲ್ಲೇ ಜನಸಂಪರ್ಕ ಕಾರ್ಯಾಲಯ ಪಡೆದಿರುವುದು ಬಿಜೆಪಿ&ಜೆಡಿಎಸ್ ಕಾರ್ಯಕರ್ತರನ್ನು ಮತ್ತಷ್ಟು ಹುರಿದುಂಬಿಸಿದೆ.