ಗ್ರಾಮಾಂತರ ಜಿಲ್ಲೆಗೆ ಕೇಂದ್ರ ತಂಡ ಭೇಟಿ

ceo meeting
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೇಂದ್ರ ತಂಡ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್) ನವದೆಹಲಿಯಿಂದ ಡಾ. ಗಾಡರ್ ಮಹಾಪತ್ರ ಅವರ ತಂಡ  ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿತು.

ಡಿಪಾರ್ಟ್‌ಮೆಂಟ್ ಆ್ ಪರ್ಸನಲ್ ಮತ್ತು ಟ್ರೈನಿಂಗ್ ಭಾರತ ಸರ್ಕಾರ ಇವರ ಆಶ್ರಯದೊಂದಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಸಂಸ್ಥೆ ಹತ್ತು ತಿಂಗಳ ಕಾಲ ವಾರ್ಷಿಕ ಫ್ಲಾಗ್ ಶ್ಿ ಕಾರ್ಯಕ್ರಮ ಭಾಗವಾಗಿ ರಾಜ್ಯಕ್ಕೆ 14 ಹಿರಿಯ ಅಧಿಕಾರಿಗಳ ತಂಡ ಆಗಮಿಸಿದ್ದು, ಇದರ ಭಾಗವಾಗಿ ಗ್ರಾಮೀಣ ಶೈಕ್ಷಣಿಕ ಭೇಟಿಯಲ್ಲಿ ಜಿಲ್ಲೆಯಲ್ಲಿ ಅನುಷ್ಠಾನವಿರುವ ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ಅನುರಾಧಾ ಅವರಿಂದ ಮಾಹಿತಿ ಪಡೆಯಿತು.

ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧಾ ಅವರು ಪಿಪಿಟಿ ಪ್ರದರ್ಶನ ಮೂಲಕ ಮಾಹಿತಿ ನೀಡಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ, ಜಲ ಜೀವನ್ ಮಿಷನ್, 15ನೇ ಹಣಕಾಸು, ಸ್ವಚ್ಚ ಭಾರತ್ ಮಿಷನ್,ಎನ್‌ಆರ್‌ಎಲ್‌ಎಂ ಯೋಜನೆ, ಕೂಸಿನ ಮನೆ, ಗ್ರಂಥಾಲಯ, ವಸತಿ ಯೋಜನೆಗಳು, ಅಟಲ್ ಭೂಜಲ್ ಯೋಜನೆ ಹಾಗೂ ಇತರೆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದನ್ನು ತಂಡಕ್ಕೆ ವಿವರಿಸಿದರು.

ಕಾರ್ಯಕ್ರಮದ ಮಾಹಿತಿ ಪಡೆದ ಅಧಿಕಾರಿಗಳ ತಂಡ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೆಚ್ಚುಗೆ ವ್ಯಕ್ತಿಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net