ದೇಶದ ಎಲ್ಲಾ ಕಡೆಯಲ್ಲೂ ಕಾಂಗ್ರೆಸ್​ ಚಡ್ಡಿ ಕಳ್ಕೊಂಡಿದೆ: ಪ್ರಲ್ಹಾದ್ ಜೋಶಿ

Prahlad joshi
Published on

ವಿಜಯಪುರ: ಆರ್​ಎಸ್​ಎಸ್​ ಚಡ್ಡಿ ಸುಡುವ ಇವರು ಮೊದಲು ಅವರ ಚಡ್ಡಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲಿ, ದೇಶಾದ್ಯಂತ ಅವರ ಚಡ್ಡಿಯನ್ನು ಜನರೇ ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ನಿಡಗುಂದಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲ ಕಡೆಯು ಜನ ನಿಮ್ಮ ಚಡ್ಡಿ ಕಸಿದುಕೊಂಡಿದ್ದಾರೆ. ರಾಜಸ್ತಾನದಲ್ಲಿ ಕಾಂಗ್ರೆಸ್ ಚೆಡ್ಡಿ ಲೂಸ್ ಆಗಿದೆ.ಜನ ಚೆಡ್ಡಿ ಕಸಿದುಕೊಂಡಿದ್ದಕ್ಕೆ ಕಾಂಗ್ರೆಸ್ RSS ಚಡ್ಡಿ ಸುಡುವ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅಲ್ಲಲ್ಲಿ ಉಳಿದಿರುವ ಚಡ್ಡಿಯನ್ನು ಜನ ಕಸಿದುಕೊಳ್ತಾರೆ.ಹಾಗೆಯೇ ಎಲ್ಲಾ ಚಡ್ಡಿಯನ್ನು ಕಸಿದು ಕಾಂಗ್ರೆಸ್ಸನ್ನು ಬೆತ್ತಲೆ ಮಾಡ್ತಾರೆ ಎಂದಿರುವ ಅವರು, ಮೊದಲು ಹುಚ್ಚರಂತೆ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

ರಾಹುಲ್ ಗಾಂಧಿ ಅಜ್ಜ ಮುತ್ತಜ್ಜ, ಅಜ್ಜಿ RSS ಒಳಗೊಳಗೆ ಸುಡಲು ಹೋಗಿದ್ದರು. ಅವರ ರಾಜಕೀಯ ಸ್ಥಿತಿ ಏನಾಯಿತೆಂದು ಎಲ್ಲರೂ ನೋಡಿದ್ದಾರೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net