ಕೇಂದ್ರ ಸಚಿವ ಜೋಶಿ ನಡೆ ಖಂಡನೀಯ

kalburgi
Published on

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ್ಮ ಮನೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಎನ್.ಸಿ. ಕಾಡದೇವರಮಠ ಅವರಿಗೆ ಸಾರ್ವಜನಿಕರ ಎದುರು ಬಾಯಿಗೆ ಬಂದಂತೆ ಬೈಯ್ದಿದ್ದು ಖಂಡನೀಯ ಎಂದು ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಬ್ಬಗಳು ಬಂದಾಗ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಮಾಜ ಘಾತುಕ ಶಕ್ತಿಗಳು ಹಾಗೂ ರೌಡಿ ಶೀಟರ್​ಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡುವುದು ಸಹಜ. ಆದರೆ, ಇದನ್ನೇ ಪ್ರಶ್ನಿಸಿ ಪಿಐ ಕಾಡದೇವರಮಠ ಅವರಿಗೆ ಸಮಾಜ ಘಾತುಕ ಶಕ್ತಿಗಳ ಮುಂದೆಯೇ ನಿಂದಿಸಿ ಧಮಕಿ ಹಾಕಿದ್ದು ನೋಡಿದರೆ ನಾಳೆ ಮಹಾನಗರದಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಏನು? ಪೊಲೀಸರು ಯಾವ ರೀತಿ ರಕ್ಷಣೆ ಕೊಡಬೇಕು.? ಎಂಬುದು ಚರ್ಚೆಯಾಗುತ್ತಿದೆ ಎಂದು ಹೇಳಿದ್ದಾರೆ.

ಇಸ್ಪೀಟ್ ಆಡಿಸುತ್ತಿದ್ದ ರೌಡಿ ಶೀಟರ್​ಗೆ ಕರೆಸಿ ವಿಚಾರಣೆ ಮಾಡಿದ ಕಾಡದೇವರಮಠ ಜತೆ ಕೇಂದ್ರ ಸಚಿವರು ನಡೆದುಕೊಂಡ ರೀತಿಯ ಕುರಿತು ಪ್ರಧಾನಿ ಅವರಿಗೆ ಪತ್ರ ಹಾಗೂ ವಿಡಿಯೋ ಕಳಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net