ದಾದಾಪೀರ್ ಜೈಮನ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

IMG-20220824-WA0059.jpg
Published on

ಹಗರಿಬೊಮ್ಮನಹಳ್ಳಿ(ವಿಜಯನಗರ):
ಹಗರಿಬೊಮ್ಮನಹಳ್ಳಿ ಮೂಲದ ಯುವ ಸಾಹಿತಿ ದಾದಾಪೀರ್ ಜೈಮನ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ೨೦೨೨ನೇ  ಸಾಲಿನ ಯುವ ಸಾಹಿತ್ಯ ಪ್ರಶಸ್ತಿ ಒಲಿದಿದೆ.
ದಾದಾಪೀರ್ ಜೈಮನ್‌ ಅವರ ‘ನೀಲಕುರಿಂಜಿ' ಕಥಾ ಸಂಕಲನಕ್ಕೆ ಯುವ ಸಾಹಿತ್ಯ ಪ್ರಶಸ್ತಿ ಬಂದಿದೆ. ಈ ಪುಸ್ತಕವನ್ನು ರಾಯಚೂರು ಜಿಲ್ಲೆಯ ಕೆ.ಗುಡದಿನ್ನಿಯ ವೈಷ್ಣವಿ ಪ್ರಕಾಶನ ಪ್ರಕಟಿಸಿತ್ತು. ಯುವ ಸಾಹಿತ್ಯ ಪ್ರಶಸ್ತಿಯ ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕ ಡಾ.ಸರಜೂ ಕಾಟ್ಕರ್ ಉಸ್ತುವಾರಿಯಲ್ಲಿ ನಡೆದಿದೆ.  ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ  ಪ್ರಧಾನ ಮಾಡಲಾಗುತ್ತದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net