ಕೇಂದ್ರ ಸರ್ಕಾರದ ಯೋಜನೆಗಳ ಜನರ ಮನ ಮುಟ್ಟಿಸಿ

27 ayr bjp
ಆಯನೂರಿನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆ ಉದ್ದೇಶಿಸಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಶಾರದಾ ಪೂರ‌್ಯಾನಾಯ್ಕ್, ಅಶೋಕ್ ನಾಯ್ಕ, ಕುಮಾರಸ್ವಾಮಿ ಇತರರಿದ್ದರು.
Published on

ಆಯನೂರು: ಪ್ರತಿಯೊಬ್ಬ ಮತದಾರರನ್ನು ಸಂಪರ್ಕಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ವಿವರಿಸಿ ಎಂದು ಕಾರ್ಯಕರ್ತರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ ಗ್ರಾಮಾಂತರ ಮಂಡಲದಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ನನ್ನ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕ್, ಮಾಜಿ ಶಾಸಕರಾದ ಅಶೋಕ್ ನಾಯ್ಕ, ಕುಮಾರಸ್ವಾಮಿ, ಮುಖಂಡರಾದ ಡಾ. ಧನಂಜಯ ಸರ್ಜಿ, ಕೇಶವಮೂರ್ತಿ, ಸಿಂಗನಹಳ್ಳಿ ಸುರೇಶ್, ಜಗದೀಶ್, ಗಾಯತ್ರಿ ಮಲ್ಲಪ್ಪ, ವಿರೂಪಾಕ್ಷಪ್ಪ, ತಮ್ಮಡಿಹಳ್ಳಿ ನಾಗರಾಜ್, ಸೋಮಿನಕೊಪ್ಪ ಕಾಂತರಾಜ್, ಬಸವರಾಜಪ್ಪ ಗೌಡ, ಸತೀಶ್ ಕಸಟ್ಟಿ, ಲಕ್ಷ್ಮಿಕಾಂತ್ ಶೆಟ್ಟಿ, ಯೋಗೇಂದ್ರ ಆಚಾರ್, ಕೇಶವ ನಾಯರ್, ಗಂಗಾನಾಯ್ಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net