ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣಕ್ಕೆ ವಿರೋಧ

Protest
Published on

ಮುದ್ದೇಬಿಹಾಳ: ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಎಲ್ಲ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಯಾವುದೇ ಕಾರಣಕ್ಕೂ ಈ ಕಾಯ್ದೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಪಟ್ಟಣದಲ್ಲಿ ಹೆಸ್ಕಾಂ ಉಪ ವಿಭಾಗದ ನಾಲ್ಕು ಶಾಖೆಗಳ ನೂರಾರು ನೌಕರರು ಸೋಮವಾರ ತೋಳಿಗೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಮಾತನಾಡಿ, ಈ ಕಾಯ್ದೆ ಜಾರಿಯಿಂದಾಗಿ ವಿದ್ಯುತ್ ಬೆಲೆ ಆಯೋಗ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ರೈತರು, ಗ್ರಾಹಕರ ಹಿತವನ್ನು ಈ ಕಾಯ್ದೆ ಬಲಿಕೊಡಲಿದೆ. ಅಲ್ಲದೆ, ಹಲವು ವರ್ಷಗಳಿಂದ ಜಿವಿಪಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮರಣ ಶಾಸನವಾಗಿದೆ ಎಂದರು.
ತಂಗಡಗಿ ಶಾಖಾಧಿಕಾರಿ ಎಂ.ಎಸ್. ತೆಗ್ಗಿನಮಠ ಮಾತನಾಡಿ, ಈ ಕಾಯ್ದೆ ಜಾರಿಯಾದರೆ ನೌಕರರು ಬೀದಿಗೆ ಬರುತ್ತೇವೆ. ಸೇವಾ ಭದ್ರತೆ ಕಸಿದುಕೊಂಡು ಹೆಸ್ಕಾಂನಲ್ಲಿ ಕೆಲಸ ಮಾಡುವವರನ್ನು ಸರ್ಕಾರ ಬೀದಿಗೆ ತಳ್ಳಲಿದೆ ಎಂದರು.
ಶಾಖಾಧಿಕಾರಿಗಳಾದ ಎಸ್.ಎಸ್. ಪಾಟೀಲ, ಆರ್.ಪಿ. ಹಿರೇಮಠ, ಬಿ.ಎಸ್. ಯಲಗೋಡ, ಎಸ್.ವೈ. ವಾಂಗಿ, ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಆರೇಶಂಕರ, ಉಪಾಧ್ಯಕ್ಷ ಎಸ್.ಬಿ. ಗಣಾಚಾರಿ, ಕಾರ್ಯದರ್ಶಿ ಆರ್.ಎಂ. ನಾಯ್ಕಮಕ್ಕಳ, ಬಿ.ಎ. ಮಡಿವಾಳರ, ಎಚ್.ಎ. ನಾಯ್ಕೋಡಿ, ಬಿ.ಟಿ. ಮ್ಯಾಗೇರಿ, ಎಸ್ಸಿ, ಎಸ್ಟಿ ನೌಕರ ಸಂಘದ ಅಧ್ಯಕ್ಷ ಜಗದೀಶ ಹಿರೇಮನಿ ಸೇರಿ ನಾಲತವಾಡ, ಢವಳಗಿ, ತಾಳಿಕೋಟೆ ಹಾಗೂ ಮುದ್ದೇಬಿಹಾಳ ಶಾಖೆ ಸಿಬ್ಬಂದಿ ಇದ್ದರು.

ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವುದರಿಂದ ಗ್ರಾಹಕರು, ರೈತರು ತೊಂದರೆಗೆ ಸಿಲುಕುವ ಸಾಧ್ಯತೆಗಳಿದ್ದು, ನೌಕರರ ವಿರೋಧಿ ಶಾಸನ ಜಾರಿಗೊಳಿಸಬಾರದು.
ಎಂ.ಎಸ್. ತೆಗ್ಗಿನಮಠ, ಶಾಖಾಧಿಕಾರಿ ತಂಗಡಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net