ಪಿಂಚಣಿ ಪರಿಷ್ಕರಿಸದ ಕೇಂದ್ರ ಸರ್ಕಾರ

CTD NEWS BSNL---08
Published on

ಚಿತ್ರದುರ್ಗ: ಭಾರತ್ ಸಂಚಾರ ನಿಗಮದ ನಿವೃತ್ತ ನೌಕರರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಅಖಿಲ ಭಾರತೀಯ ಬಿಎಸ್‌ಎನ್‌ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ವಲಯ ಕಾರ್ಯದರ್ಶಿ ಜಯಶಂಕರ್ ಆರೋಪಿಸಿದರು.

ಇತ್ತೀಚೆಗೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸಮಿತಿಯ ಜಿಲ್ಲಾ ಘಟಕದ ಸಭೆಯಲ್ಲಿ ಮಾತನಾಡಿ, ನಿಗಮದ ನಿವೃತ್ತ ನೌಕರರಿಗೆ ನಿಜಕ್ಕೂ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ತನ್ನ ನಿಲುವು ಬದಲಾಯಿಸಿ ನಮಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕಲ್ಪಿಸಬೇಕು. ಬಿಎಸ್‌ಎನ್‌ಎಲ್ ಪಿಂಚಣಿದಾರರಿಗೆ 2017 ಜನವರಿ 1ರಿಂದ ಪಿಂಚಣಿ ಪರಿಷ್ಕರಣೆ ಮಾಡಿಲ್ಲ. ನಿವೃತ್ತ ಸರ್ಕಾರಿ ನೌಕರರಿಗೆ ಕೊಡುವಂತೆ ಸಂಚಿತ ನಿಧಿಯಿಂದಲೇ ಪಿಂಚಣಿ ಪಾವತಿಸುತ್ತಿದ್ದು, ಪರಿಷ್ಕರಣೆಯಲ್ಲಿ ಮಾತ್ರ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಎಲ್ಲ ಪಿಂಚಣಿದಾರರ ಪಿಂಚಣಿ ಪರಿಷ್ಕರಣೆ ರದ್ದುಗೊಳಸಿಸುತ್ತಿದ್ದು, ಸಂವಿಧಾನಾತ್ಮಕ ಹಕ್ಕಗಳನ್ನು ಕಿತ್ತುಕೊಳ್ಳುತ್ತಿದೆ. ಹಿರಿಯ ನಾಗರಿಕರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದೆ ಎಂದು ಜಯಶಂಕರ್ ಕಿಡಿಕಾರಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಬೋರಯ್ಯ ಮಾತನಾಡಿ, ಆಗಿರುವ ದೊಡ್ಡ ಪ್ರಮಾಣದ ಲೋಪವನ್ನು ಕೂಡಲೇ ಸರಿಪಡಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.

ಪಿಂಚಣಿ ವಿಚಾರದಲ್ಲಿ ಅನ್ಯಾಯವಾದರೆ ಸಹಿಸಲಾಗದು. ನಾವು ನಮ್ಮ ಹಕ್ಕುಗಳನ್ನು ಮಾತ್ರ ಕೇಳುತ್ತಿದ್ದೇವೆ ಎಂದರು.

ಹನುಮಂತಪ್ಪ ಬಜಾರಿ, ಷಣ್ಮುಖಪ್ಪ, ಆನಂದ್, ಕೆ. ಸತ್ತಾರ್, ತುಮಕೂರಿನ ರಾಜ್‌ಕುಮಾರ್, ಎಂ.ವಿ. ಸ್ವಾಮಿ ಮತ್ತಿತರರು ಇದ್ದರು.

75 ವರ್ಷ ವಯಸ್ಸು ಪೂರ್ಣಗೊಳಿಸಿದ ನಿವೃತ್ತರನ್ನು ಸಂಘದಿಂದ ಗೌರವಿಸಲಾಯಿತು.

(ಸಿಟಿಡಿ 15 ನ್ಯೂಸ್ ಬಿಎಸ್‌ಎನ್‌ಎಲ್)

ಚಿತ್ರದುರ್ಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಿಎಸ್‌ಎನ್‌ಎಲ್ ನಿವೃತ್ತ ನೌಕರರ ಜಿಲ್ಲಾ ಸಂಘದ ಸಮಿತಿ ಸಭೆಯಲ್ಲಿ ಜಯಶಂಕರ್, ಬೋರಯ್ಯ, ಹನುಮಂತಪ್ಪ ಬಜಾರಿ, ಷಣ್ಮುಖಪ್ಪ, ಆನಂದ್, ಕೆ. ಸತ್ತಾರ್, ತುಮಕೂರಿನ ರಾಜ್‌ಕುಮಾರ್, ಎಂ.ವಿ. ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net