ಕೇಂದ್ರ ಜನ ವಿರೋಧ ಬಜೆಟ್ ಮಂಡಿಸಿದೆ

central budjet koppal protest
ಕೇಂದ್ರ ಬಜೆಟ್ ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ಪದಾಧಿಕಾರಿಗಳು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ತಾಲೂಕು ಪದಾಧಿಕಾರಿಗಳಾದ ಸುಂಕಪ್ಪ ಗದಗ, ಹುಸೇನಪ್ಪ ಕೆ., ಬಸವರಾಜ ಮೇಳಿ, ಹುಲುಗಪ್ಪ ಗೋಕಾವಿ, ಬಸವರಾಜ ಬಿಜ್ಕಲ್, ಹುಸೇನ್ ಸಾಬ್ ನದಾಫ್, ಅಮರವ್ವ ಗದಗ, ಶಾಂತವ್ವ ಬೆಂಗಳೂರಮನಿ, ಹುಸೇನವ್ವ ಅರಸನ್ನಿ, ಸುಂಕಮ್ಮ ಕುಕುನೂರು ಇದ್ದರು.
Published on

ಕೊಪ್ಪಳ: ಕೇಂದ್ರ ಸರ್ಕಾರ ಜನ ವಿರೋಧಿ ಬಜೆಟ್ ಮಂಡಿಸಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ಪದಾಧಿಕಾರಿಗಳು ಗುರುವಾರ ನಗರದ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಬಜೆಟ್ ದೇಶದ ಕೃಷಿ ಕಾರ್ಮಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ. ಕೃಷಿ ಕಾರ್ಮಿಕರನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಮತಗಳನ್ನು ಸೆಳೆಯಲು ಕೋಮು ವಿಭಜನೆ ಬಳಸಿಕೊಳ್ಳುವ ಬಿಜೆಪಿ ಗ್ರಾಮೀಣ ಜನರ ಜೀವನೋಪಾಯದ ಮೇಲೆ ಭೀಕರ ದಾಳಿ ಮುಂದುವರೆಸಿದೆ. ಬಜೆಟ್ ಸಂಪೂರ್ಣ ಸಾವಾನ್ಯ ಜನರ ವಿರೋಧಿ ಮತ್ತು ಕಾರ್ಪೊರೇಟ್‌ಗಳ ಪರವಾಗಿದೆ. ಇದು ಕೋಮುವಾದಿ ಮತ್ತು ಬಲಪಂಥೀಯ ಜನರನ್ನು ತಪ್ತಿಪಡಿಸುವ ಗುರಿ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕ ಸಮೀಕ್ಷೆಯು ಆಹಾರದ ಬೆಲೆ ಶೇ.೪ರಿಂದ ೭ವರೆಗೆ ಏರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಅಘಾತಕಾರಿ ವಿಚಾರವೆಂದರೆ ಇಂದಿನ ಬಜೆಟ್ ಈ ಪ್ರಮುಖ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಿಲ್ಲ. ಪಡಿತರ ವ್ಯವಸ್ಥೆ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಬಜೆಟ್‌ನಲ್ಲಿ ಯಾವುದೇ ನಿರ್ದಿಷ್ಟ ಕ್ರಮಗಳಿಲ್ಲ. ಹಿಂದಿನ ವರ್ಷ ಆಹಾರ ಭದ್ರತೆಗೆ ೨.೧೨ ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದರೆ, ಈ ವರ್ಷ ಈ ಮೊತ್ತ ೨.೦೫ ಲಕ್ಷ ಕೋಟಿಗೆ ಇಳಿಕೆಯಾಗಿದೆ. ಅದಕ್ಕೂ ಮೊದಲು ಆಹಾರ ಭದ್ರತೆಗೆ ೨.೭೨ ಲಕ್ಷ ಕೋಟಿ ಬಜೆಟ್ ಮೀಸಲಿಡಲಾಗಿತ್ತು. ಕೇಂದ್ರ ಬಜೆಟ್ ಒಟ್ಟು ಗಾತ್ರ ೪೪ ಲಕ್ಷ ಕೋಟಿಯಿಂದ ೪೮ ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಜೆಟ್‌ನ ಒಟ್ಟು ಗಾತ್ರದಲ್ಲಿ ಶೇ.೧೦ರಷ್ಟು ಹೆಚ್ಚಳವಾದಾಗ ಎಲ್ಲಾ ಯೋಜನೆಗಳಿಗೂ ಅನುದಾನದ ಪ್ರವಾಣ ಹೆಚ್ಚಬೇಕಿತ್ತು. ಅಂತಹ ಹೆಚ್ಚಳ ಕಂಡುಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ತಾಲೂಕು ಪದಾಧಿಕಾರಿಗಳಾದ ಸುಂಕಪ್ಪ ಗದಗ, ಹುಸೇನಪ್ಪ ಕೆ., ಬಸವರಾಜ ಮೇಳಿ, ಹುಲುಗಪ್ಪ ಗೋಕಾವಿ, ಬಸವರಾಜ ಬಿಜ್ಕಲ್, ಹುಸೇನ್ ಸಾಬ್ ನದಾಫ್, ಅಮರವ್ವ ಗದಗ, ಶಾಂತವ್ವ ಬೆಂಗಳೂರಮನಿ, ಹುಸೇನವ್ವ ಅರಸನ್ನಿ, ಸುಂಕಮ್ಮ ಕುಕುನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net