ಕೃಷಿ ಸಂಶೋಧನೆ, ಉತ್ಪಾದಕತೆಗೆ ಒತ್ತು ಕೊಟ್ಟಿರುವುದು ಸ್ವಾಗತಾರ್ಹ

23 Dwd 4 Dr. Rajendra Poddar
Published on

ಧಾರವಾಡ: ಕೇಂದ್ರ ಸರ್ಕಾರ ಮಂಡಿಸಿರುವ 2024- 25ರ ಹಣಕಾಸು ಆಯವ್ಯಯದಲ್ಲಿ ಪ್ರಸಕ್ತ ವರ್ಷಕ್ಕೆ ಒಟ್ಟು 48.21 ಲಕ್ಷ ಕೋಟಿ ರೂಪಾಯಿ ವೆಚ್ಚವನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಕೃಷಿ ಮತ್ತು ಸಂಬAಽತ ಕ್ಷೇತ್ರಗಳಿಗಾಗಿ 1,51,851 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಇದು ಒಟ್ಟು ಆಯವ್ಯದ ವಿವಿಧ ತಖ್ತೆಗಳ ಪೈಕಿ ರಕ್ಷಣಾ ವ್ಯವಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳ ನಂತರ 3ನೇ ಅತೀ ದೊಡ್ಡ ಮೊತ್ತವಾಗಿದೆ ಎಂದು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಕೇಂದ್ರ ಬಜೆಟ್ ಕುರಿತು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ವಿಕೋಪಗಳ ಕಾರಣಗಳಿಂದಾಗಿ, ಉತ್ಪಾದಕತೆ ಕುಂಠಿತವಾಗುತ್ತಿರುವುದು ಕಂಡುಬರುತ್ತದೆ. ಆಯವ್ಯವು ಕೃಷಿ ಸಂಶೋಧನೆ ಮತ್ತು ಉತ್ಪಾದಕತೆಯ ಮೇಲೆ ಹೆಚ್ಚಿನ ಒತ್ತು ಕೊಟ್ಟಿರುವುದು ಸ್ವಾಗತಾರ್ಹವಾಗಿದೆ. ಅದೇ ರೀತಿ ರಾಷ್ಟಿçÃಯ ಸಹಕಾರ ನೀತಿಯನ್ನು ಘೋಷಿಸಿರುವುದು ತುಂಬ ಪ್ರೋತ್ಸಾಹದಾಯಕವಾಗಿದೆ. ಕೃಷಿಯ ವಿವಿಧ ವಿಭಾಗಗಳನ್ನು ಸಹಕಾರ ಸಂಘಗಳ ಮೂಲಕ ಸದೃಢಗೊಳಿಸುವ ಸಾಧ್ಯತೆಗಳಿವೆ. ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಽಸುವುದರಿಂದ ಎಣ್ಣೆ ಕಾಳುಗಳ ಆಮದು ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ವಿದೇಶ ವಿನಿಮಯದ ಹಣವನ್ನು ಉಳಿತಾಯ ಮಾಡಬಹುದು.
ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡುವುದರ ಮೂಲಕ ರೈತÀರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ರೈತ ಕುಟುಂಬದ ಆದಾಯವನ್ನು ಹೆಚ್ಚಿಸಬಹುದಾಗಿದೆ. ರಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸುವುದರಿಂದ ಪರ್ಯಾವರಣ ಸಂರಕ್ಷಣೆಯನ್ನೂ ಸಾಽಸಿದಂತಾಗುತ್ತದೆ. ಸರ್ಕಾರಗಳು ದಶಕಗಳಿಂದ ನೈಸರ್ಗಿಕ ಕೃಷಿ ಅಭಿವೃದ್ಧಿಗೆ ಒತ್ತು ಕೊಟ್ಟರೂ ನಿರೀಕ್ಷಿತ ಗುರಿಯನ್ನು ಸಾಽಸಲಾಗುತ್ತಿಲ್ಲ. ಜೈವಿಕ ಪರಿಗಳ ಉತ್ಪಾದನೆಗೂ ಮಹತ್ವ ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಸಮಸ್ಯೆ ಇರುವುದರಿಂದ ಹೆಚ್ಚಿನ ಡಿಜಿಟಲ್ ಮಾಧ್ಯಮಗಳನ್ನು ಪ್ರೋತ್ಸಾಹಿಸುವ ಅವಶ್ಕಕತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಡಿಜಿಟಲ್ ಮೂಲಭೂತ ಸೌಕರ್ಯವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದೆ ಬಂದಿರುವುದು ಸ್ವಾಗತಾರ್ಹ. ಗ್ರಾಮೀಣಾಭಿವೃದ್ಧಿ ಮತ್ತು ಜಲ ಸಂಪನ್ಮೂಲ ಇಲಾಖೆಗಳಿಗೆ ನೀಡಿರುವ ಅನುದಾನಗಳನ್ನು ಕ್ರೋಢೀಕರಿಸಿದಾಗ ಒಟ್ಟಾರೆ ಕೃಷಿ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ದೊರೆಯಬಹುದೆಂದು ಆಶಿಸಬಹುದು.
ಕೃಷಿ ಅರ್ಥಶಾಸ್ತಿçÃಯ ವಿಶ್ಲೇಷಣೆ ಪ್ರಕಾರ ದಶಕಗಳಿಂದ ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಖಾಸಗಿ ಬಂಡವಾಳದ ಹೂಡಿಕೆ ಸಾರ್ವಜನಿಕ ಬಂಡವಾಳ ಹೂಡಿಕೆ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರ, ವಿಶೇಷವಾಗಿ ಹವಾಮಾನ ವೈಪರೀತ್ಯಯದ ಹಿನ್ನೆಲೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಒಟ್ಟಾರೆ ಕೃಷಿ ಕ್ಷೇತ್ರದ ವಿಸ್ತ್ತಾರ ಮತ್ತು ಸವಾಲುಗಳನ್ನು ಗಮನಿಸಿದಾಗ ಇನ್ನೂ ಹೆಚ್ಚಿನ ಪ್ರಮಾಣದ ಸಾರ್ವಜನಿಕ ಅನುದಾನ ಬೇಕಿತ್ತು ಎಂದು ಡಾ. ಪೋದ್ದಾರ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net