

ಮಂಡ್ಯ: ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರು ಫೆ.4 ಮತ್ತು 5ರಂದು ವಿವಿಧ ತಾಲೂಕಿನಲ್ಲಿ ತಾಪಂ ಸಭಾಂಗಣದಲ್ಲಿ ಕೇಂದ್ರ, ರಾಜ್ಯ ಪುರಸ್ಕೃತ ಯೋಜನೆಯ ಪ್ರಗತಿ ಪರಿಶೀಲಿಸಲಿದ್ದಾರೆ. 4ರಂದು ಬೆಳಗ್ಗೆ 10ಗಂಟೆಗೆ ನಾಗಮಂಗಲ, ಮಧ್ಯಾಹ್ನ 12.30ಕ್ಕೆ ಮದ್ದೂರು, 3ಗಂಟೆಗೆ ಮಳವಳ್ಳಿ, 5ರಂದು ಬೆಳಗ್ಗೆ 10 ಗಂಟೆಗೆ ಶ್ರೀರಂಗಪಟ್ಟಣ, ಮಧ್ಯಾಹ್ನ 12ಗಂಟೆಗೆ ಪಾಂಡವಪುರ ಮತ್ತು ಮಧ್ಯಾಹ್ನ 2.30ಕ್ಕೆ ಕೆ.ಆರ್.ಪೇಟೆಯಲ್ಲಿ ಸಭೆ ಮಾಡಲಿದ್ದಾರೆ.
ಆದ್ದರಿಂದ ತಾಲೂಕುಮಟ್ಟದ ಅಧಿಕಾರಿಗಳು, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಗ್ರಾಪಂ ಪಿಡಿಒ ಕಡ್ಡಾಯವಾಗಿ ಹಾಜರಿರುವಂತೆ ಪ್ರಕಟಣೆ ತಿಳಿಸಿದೆ.