ನರಗುಂದಕ್ಕೂ ಬಂದ ಕೇಂದ್ರದ ಸಿಎಸ್‌ಸಿ ಪ್ರಚಾರ ವಾಹನ

22 NRD STORY
Published on

ನರಗುಂದ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳನ್ನು ಸಾರ್ವಜನಿಕರ ಮನೆಮನೆಗೆ ತಲುಪಿಸುವ ಸಿಎಸ್‌ಸಿ (ಕಾಮನ್ ಸರ್ವಿಸ್ ಸೆಂಟರ್) ಪ್ರಚಾರಾಂದೋಲನದ ವಾಹನಕ್ಕೆ ಶಾಸಕ ಸಿ.ಸಿ. ಪಾಟೀಲ ಪಟ್ಟಣದಲ್ಲಿ ಬುಧವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕೆಲಸ ಸಿಎಸ್‌ಸಿ ವಾಹನಗಳು ಮಾಡುತ್ತಿವೆ. ಇದಕ್ಕಾಗಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶಾದ್ಯಂತ 400 ವಾಹನಗಳಿಗೆ ಈಗಾಗಲೇ ಚಾಲನೆ ನೀಡಿದೆ. ರಾಜ್ಯಕ್ಕೆ ನೀಡಿರುವ 7 ವಾಹನಗಳ ಪೈಕಿ ಜಿಲ್ಲೆಯ ನರಗುಂದ ಮತಕ್ಷೇತ್ರಕ್ಕೆ ಒಂದು ಪ್ರತ್ಯೇಕ ವಾಹನ ನೀಡಿದ್ದಾರೆ ಎಂದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಹರ್ ಘರ್ ಬಿಜಲಿ, ಆಯುಷ್ಮಾನ್ ಭಾರತ ಮುಂತಾದ ಯೋಜನೆಗಳ ಸೇವೆಗಳನ್ನು ಅರ್ಹ ಫಲಾನುಭವಿಗಳು ತಮ್ಮ ಮನೆ ಮುಂದೆ ಸಿಎಸ್‌ಸಿ ವಾಹನ ಬಂದಾಗ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net