ಮಹದಾಯಿ ಜಾರಿಯಲ್ಲಿ ಕೇಂದ್ರ ವಿಫಲ

31 nrd 6a
Published on

ನರಗುಂದ: ಮಹದಾಯಿ ಯೋಜನೆ ಜಾರಿಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ನಮ್ಮ ಕರ್ನಾಟಕ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ ಇಜಾರಿ ಆರೋಪಿಸಿದರು.

ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಕಪ್ಪತಗುಡ್ಡದದಲ್ಲಿ ಗಣಿಗಾರಿಕೆ ತಡೆಯಬೇಕು ಎಂದು ಆಗ್ರಹಿಸಿದರು. ಉಪಾಧ್ಯಕ್ಷ ಭೀಮಣ್ಣ ಇಂಗಳ್ಳಿ, ಜಿಲ್ಲಾಧ್ಯಕ್ಷ ರವಿ ಚಿಂತಾಲ, ಗೌರವಾಧ್ಯಕ್ಷ ಮುತ್ತು ರಾಯರಡ್ಡಿ, ಕಾರ್ಯದರ್ಶಿ ಯಶವಂತ ನಡುವಿನಮನಿ, ಮುತ್ತು ಸುರಕೋಡ, ಎಚ್.ಎನ್. ಹಳಕಟ್ಟಿ, ರಾಹುಲ್ ಶೆಟ್ಟರ್, ಗವಿಸಿದ್ದಯ್ಯ ಹಳ್ಳಿಕೇರಿಮಠ, ಹರೀಶ ಕುಲಕರ್ಣಿ, ನರಗುಂದ ತಾಲೂಕು ಮಹಿಳಾ ಘಟಕದ ಗೌರವಾಧ್ಯಕ್ಷೆ ಮಹಾನಂದಮ್ಮ ಹಿರೇಮಠ, ಡಾ.ಎಚ್.ಆರ್. ಹಿರೇಹಾಳ ಮಾತನಾಡಿದರು. ಈರಪ್ಪ ಮ್ಯಾಗೇರಿ, ವೀರೇಶ ಶಿವಸಿಂಪಿಗೇರಿ, ಅಕ್ಷಯ ಚಳ್ಳಮರದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net