ಸೊರಟೂರ ಸಹಕಾರಿ ಸಂಘದ ಶತಮಾನೋತ್ಸವ 29ರಂದು

MUL SORTUR
Published on

ಮುಳಗುಂದ: ಸಮೀಪದ ಸೊರಟೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಹಾಗೂ ನೂತನ ಮಹಡಿ ಉದ್ಘಾಟನೆ ಸಮಾರಂಭ ಏ. 29ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಎಫ್. ಕಲಗುಡಿ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ 1913ರಲ್ಲಿ ದಿ. ತಿರಕೋ ಲಕ್ಷ್ಮಣ ವೈದ್ಯ ಅವರ ಮುಂದಾಳತ್ವದಲ್ಲಿ ಈ ಕೃಷಿ ಪತ್ತಿನ ಸಂಘ ಸ್ಥಾಪಿಸಲಾಯಿತು. ಹಲವು ಏಳುಬೀಳುಗಳ ನಡುವೆ ಸಂಘವು ಸಾಗಿ ಬಂದಿದೆ. ಪ್ರಸ್ತುತ 2,317 ಸದಸ್ಯರನ್ನು ಎಂದು ತಿಳಿಸಿದರು.

ಏ. 29ರಂದು ಬೆಳಗ್ಗೆ 7ಕ್ಕೆ ಮೆರವಣಿಗೆ, 9ಕ್ಕೆ ಸಹಕಾರಿ ಧ್ವಜಾರೋಹಣ, 10ಕ್ಕೆ ನೂತನ ಮಹಡಿ ಕಟ್ಟಡ ಉದ್ಘಾಟನೆ ನೆರವೇರಲಿದೆ.

ಬಳಿಕ ನಡೆಯುವ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅನ್ನದಾನೇಶ್ವರ ಶಾಖಾ ಮಠದ ಶಿವಯೋಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಈ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದು ಕಲಗುಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net