ಪರಿಪೂರ್ಣ ವ್ಯಕ್ತಿಯಾಗಲು ಶ್ರೀಕೃಷ್ಣನ ಸಂದೇಶ ತಿಳಿಯಿರಿ

26manju5
Published on

ಬೆಳಗಾವಿ: ಪ್ರಸ್ತುತ ದಿನಮಾನಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಇತರ ಸಮಸ್ಯೆಗಳ ಪರಿಹಾರಕ್ಕೆ ಶ್ರೀಕೃಷ್ಣನ ರಾಜನೀತಿಯಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ಶ್ರೀಕೃಷ್ಣ ಸಂದೇಶ, ನೀತಿಗಳ ಬಗ್ಗೆ ಅಧ್ಯಯನ ಮಾಡಿದರೆ ಮಾತ್ರ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದು ಅಯೋಧ್ಯೆ ಶ್ರೀರಾಮ ಮಂದಿರ ಖಜಾಂಚಿ, ಗೀತಾ ಪರಿವಾರದ ಸಂಸ್ಥಾಪಕ ಗೋವಿಂದದೇವ ಗಿರೀಜಿ ಮಹಾರಾಜರು ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಸೆಂಟೇನರಿ ಕನ್ವೆನ್‌ಷನ್ ಸೆಂಟರ್‌ನಲ್ಲಿ ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಅಕಾಡೆಮಿ ಆಫ್ ಕಂಪೆರಿಟಿವ್ ಫಿಲಾಸಪಿ ಆ್ಯಂಡ್ ರಿಲಿಜನ್ (ಎಸಿಪಿಆರ್) ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಶ್ರೀಕೃಷ್ಣ ನೀತಿ ಎಂಬ ವಿಷಯದ ಮೇಲಿನ ಕೊನೆಯ ದಿನವಾದ ಶನಿವಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಪ್ರಸ್ತುತ ಸಮಾಜದಲ್ಲಿ ಡ್ರಾಮಾ ರಾಜಕಾರಣ ಬಹಳ ಅಪಾಯಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಡ್ರಾಮಾಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಗುವುದಿಲ್ಲ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ ವಿನಃ ಒಳ್ಳೆಯದನ್ನು ಬಯಸುವುದಿಲ್ಲ ಎಂದರು. ಎಸಿಪಿಆರ್ ಕಾರ್ಯದರ್ಶಿ ಎಂ.ಬಿ.ಝಿರಲಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net