

ವಿಜಯವಾಣಿ ಸುದ್ದಿಜಾಲ ಕಡಬ
ಸಹಕಾರ ಕ್ಷೇತ್ರದಿಂದಗಿ ಗ್ರಾಮೀಣ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಸಹಕಾರಿ ಕ್ಷೇತ್ರವು ರೈತರ ಜೀವನಾಡಿಯಾಗಿದ್ದು, ಸಮಾಜದ ಏಳಿಗೆಗೂ ಕಾರಣವಾಗಿದೆ. ಹಿರಿಯರ ಅವಿರತ ಶ್ರಮದಿಂದ ಚಾರ್ವಕ ಸಿ.ಎ ಬ್ಯಾಂಕ್ ಶತವರ್ಷ ಪೂರೈಸಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಪ್ರಯುಕ್ತ ಕಾಣಿಯೂರಲ್ಲಿ ಶುಕ್ರವಾರ ಆಯೋಜಿಸಿದ್ದ ಶತಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ., ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಸೀತಾರಾಮ ಕೇವಳ, ಉಪ ಸಂಪಾದಕ ವಚನಾ ಪ್ರದೀಪ್ ಅರುವಗುತ್ತು, ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ಪಿಡಿಒ ರಘು ಎನ್.ಬಿ., ಕಾಣಿಯೂರು ಮಠದ ವ್ಯವಸ್ಥಾಪಕ ಶ್ರೀನಿಧಿ ಆಚಾರ್, ಪ್ರಮುಖರಾದ ವಸಂತ ಎಸ್., ಧನಂಜಯ ಕೇನಾಜೆ, ಬಾಲಕೃಷ್ಣ ಗೌಡ ಇಡ್ಯಡ್ಕ, ಅನಂತಕುಮಾರ್ ಬೈಲಂಗಡಿ, ಪರಮೇಶ್ವರ ಗೌಡ ಅನಿಲ, ರಮೇಶ್ ಉಪ್ಪಡ್ಕ, ಸುಂದರ ಗೌಡ ದೇವಸ್ಯ, ವಿಶ್ವನಾಥ ಕೂಡಿಗೆ, ದಿವಾಕರ ಮರಕ್ಕಡ, ಲೋಕೇಶ್ ಆತಾಜೆ, ರತ್ನಾವತಿ ಮುದುವ, ವೀಣಾ ಅಂಬುಲ, ಶೀಲಾವತಿ ಮುಗರಂಜ ಉಪಸ್ಥಿತರಿದ್ದರು.
ಗಣೇಶ್ ಉದನಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ವಂದಿಸಿದರು. ವಸಂತ ಎಸ್. ನಿರೂಪಿಸಿದರು.
ಸಾಧಕರಿಗೆ ಗೌರವಾರ್ಪಣೆ
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ರಾಷ್ಟ್ರಮಟ್ಟದ ಕ್ರೀಡಾಪಟು ಹಂಸಿಕಾ ಅಂಬುಲ, ಸಂಘದ ಸ್ಥಾಪಕ ಸದಸ್ಯರು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಮತ್ತು ಮಾಜಿ ನಿರ್ದೇಶಕರು, ಸ್ಮರಣ ಸಂಚಿಕೆ ಸಮಿತಿಯವರು ಹಾಗೂ ಸಹಕರಿಸಿದವರನ್ನು ಸನ್ಮಾನಿಸಲಾಯಿತು.