ಸ್ಮಶಾನ ಒತ್ತುವರಿ ಖುಲ್ಲಾ: ಅಂತ್ಯ ಸಂಸ್ಕಾರಕ್ಕೆ ಅನುವು

21 ckm 10
ಚಿಕ್ಕಮಗಳೂರು ತಾಲೂಕು ಮತ್ತಾವರದಲ್ಲಿ ಸ್ಮಶಾನದ ಜಾಗ ಒತ್ತುವರಿಯಾಗಿದೆ ಎಂಬ ಪ್ರದೇಶಕ್ಕೆ ತಹಸೀಲ್ದಾರ್ ಸುಮಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಲೆಕ್ಕಾಧಿಕಾರಿ ಪೂರ್ಣಿಮಾ, ಗ್ರಾಮ ಲೆಕ್ಕಿಗರಾದ ಪಶುಕುಮಾರ್, ಎಂ.ಜೆ. ಉಮೇಶ್, ಗ್ರಾಮಸ್ಥರಾದ ಪ್ರದೀಪ್, ಗುರುಸ್ವಾಮಿ, ಪರಮೇಶ್, ಧರ್ಮೇಶ್, ಮಹೇಶ್, ರಘು, ಯೋಗೀಶ್, ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ಮತ್ತಾವರ ಗ್ರಾಮದ ಒತ್ತುವರಿಯಾಗಿದ್ದ ದಲಿತ ಸಮುದಾಯಕ್ಕೆ ಮೀಸಲಿರಿಸಿದ್ಧ ಸ್ಮಶಾನ ಜಾಗವನ್ನು ತಹಸೀಲ್ದಾರ್ ಸುಮಂತ್ ನೇತೃತ್ವದಲ್ಲಿ ಶುಕ್ರವಾರ ಅಕ್ರಮ ಒತ್ತುವರಿದಾರರಿಂದ ತೆರವುಗೊಳಿಸಿ, ಪರಿಶಿಷ್ಟ ಸಮುದಾಯದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಲಾಗಿದೆ.

ಮತ್ತಾವರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸ್ಮಶಾನವಿಲ್ಲದೇ ಕೆರೆ ಅಥವಾ ಗುಡ್ಡಗಳಲ್ಲಿ ಶವ ಸಂಸ್ಕಾರ ನಡೆಸುವ ಪರಿಸ್ಥಿತಿಯಿತ್ತು. ಈ ಸಂಬAಧ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೇರೆಗೆ ದಂಬದಹಳ್ಳಿ ಸರ್ವೆ ನಂ.೦೬ ರಲ್ಲಿ ೩.೧ ಎಕರೆ ಜಾಗವನ್ನು ಗುರುತಿಸಿ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಬಳಿಕ ಈ ಜಾಗ ಒತ್ತುವರಿಯಾಗಿತ್ತು.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಚಿದಾನಂದ್, ಮತ್ತಾವರ ಗ್ರಾಪಂ ವ್ಯಾಪ್ತಿಯ ದಂಬದಹಳ್ಳಿಯಲ್ಲಿ ಪ್ರಸ್ತುತ ೧೮ ಗುಂಟೆಯನ್ನು ಮಾತ್ರ ಸ್ಮಶಾನಕ್ಕೆಂದು ಗುರುತಿಸಿ ಉಳಿಕೆ ಜಾಗವನ್ನು ಸಮುದಾಯಕ ಏಳಿಗೆಗೆ ಬಳಸಿಕೊಳ್ಳಲು ಸರ್ಕಾರ ಸೂಚಿಸಿತ್ತು. ಇದಾದ ಬಳಿಕ ಕೆಲವು ತಿಂಗಳುಗಳ ನಡುವೆ ಗ್ರಾಮದ ಸ್ಥಳೀಯ ವ್ಯಕ್ತಿಯೊಬ್ಬರು ಸರ್ಕಾರಿ ಜಾಗವನ್ನು ಒತ್ತುವರಿಗೊಳಿಸಿ ಸಮುದಾಯದ ಶವಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದರು. ಇದರಿಂದ ಮನನೊಂದ ಗ್ರಾಮಸ್ಥರು ಆ ವ್ಯಕ್ತಿಗೆ ದಾಖಲೆ ಸಮೇತ ಸರ್ಕಾರಿ ಜಾಗವೆಂದು ಮನವರಿಕೆ ಮಾಡಿಕೊಟ್ಟರು ಒಪ್ಪದೇ ತೊಂದರೆ ನೀಡುತ್ತಿದ್ದರು.
ಗ್ರಾಮದಲ್ಲಿ ಇಂದು ಪರಿಶಿಷ್ಟ ಜಾತಿಯ ಓರ್ವ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಮುಂದಾಗುತ್ತಿರುವ ವೇಳೆ ಒತ್ತುವರಿದಾರ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ಸಂಬAಧ ತಹಸೀಲ್ದಾರ್‌ಗೆ ದೂರವಾಣಿ ಕರೆ ಮಾಡಲಾಯಿತು. ಅಧಿಕಾರಿ ವೃಂದ ಹಾಗೂ ದಾಖಲೆ ಸಮೇತ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಜಾಗವನ್ನು ಖುಲ್ಲಾಗೊಳಿಸಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದರು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಪೂರ್ಣಿಮಾ, ಗ್ರಾಮ ಲೆಕ್ಕಿಗರಾದ ಪಶುಕುಮಾರ್, ಎಂ.ಜೆ. ಉಮೇಶ್, ಗ್ರಾಮಸ್ಥರಾದ ಪ್ರದೀಪ್, ಗುರುಸ್ವಾಮಿ, ಪರಮೇಶ್, ಧರ್ಮೇಶ್, ಮಹೇಶ್, ರಘು, ಯೋಗೀಶ್, ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net