

ಕಲಘಟಗಿ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ತಡಸ ಕ್ರಾಸ್ ಬಳಿ ಸಿಮೆಂಟ್ ರಸ್ತೆ ಕಿತ್ತು ಹೋಗಿ ಸರಳುಗಳು ಎದ್ದು ಕಾಣುವ ಸ್ಥಳಗಳಲ್ಲಿ ಶುಕ್ರವಾರ ಹೆದ್ದಾರಿ ಅಧಿಕಾರಿಗಳು ಸಿಮೆಂಟ್ ಹಾಕಿ ಪ್ಲಾಸ್ಟರ್ ಹಾಕಿಸಿದ್ದಾರೆ.
ಹೆದ್ದಾರಿ ಕಾಮಗಾರಿ ಕಳಪೆಯಾಗಿದ್ದು, ರಸ್ತೆ ಮೇಲೆ ಬಿದ್ದಿರುವ ತಗ್ಗು-ಗುಂಡಿಗಳು, ವಿದ್ಯುತ್ ಕಂಬ, ರಸ್ತೆ ಮೇಲೆ ಕಂಡು ಬಂದ ಕಬ್ಬಿಣದ ಸರಳುಗಳ ಕುರಿತು ಆ. 10ರಂದು ‘ವಿಜಯವಾಣಿ’ಯಲ್ಲಿ ‘ಇದು ಹೆದ್ದಾರಿ... ಮಸಣಕ್ಕೂ ದಾರಿ ?’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ರಸ್ತೆ ಮೇಲಿದ್ದ ತಗ್ಗು ಗುಂಡಿಗಳಿಗೆ ಸಿಮೆಂಟ್ ಹಾಕಿ ಮುಚ್ಚಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-63ರ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆ ಪಕ್ಕದ ಫೇವರ್ಸ್, ವಿದ್ಯುದ್ದೀಪ, ರಸ್ತೆ ಪಕ್ಕದಲ್ಲಿನ ಮಾರ್ಗಸೂಚಿಗಳು ಸೇರಿ ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.