ನಿರ್ಮಾಣ ಕ್ಷೇತ್ರದ ಮೂಲ ವಸ್ತು ಸಿಮೆಂಟ್

CEMENT
Published on

ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಇದು ನಿರ್ಮಾಣ ಕ್ಷೇತ್ರದ ಬಹುದೊಡ್ಡ ಅಂಗ. ಇಂತಹ ಉದ್ಯಮದಲ್ಲಿ ಕಟ್ಟಡ ನಿರ್ಮಿಸಲು ಬೇಕಾದ ಮೂಲಭೂತ ವಸ್ತುಗಳಾದ ಸಿಮೆಂಟ್, ಕಬ್ಬಿಣ ಮುಂತಾದವುಗಳು ಗುಣಮಟ್ಟದಿಂದ ಕೂಡಿದ್ದರೆ ಹೆಚ್ಚು ಬಾಳಿಕೆ ಹಾಗೂ ಬದುಕಿಗೆ ಅಧಿಕ ಸುರಕ್ಷತೆಯನ್ನು ಒದಗಿಸುತ್ತವೆ.

ಮನೆ ಕಟ್ಟಿ ನೋಡು… ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರ ಜೀವನದಲ್ಲಿ ಸೂರು ಒಂದನ್ನು ಮಾಡಿಕೊಳ್ಳಬೇಕಾದರೆ ಅನೇಕ ಜನರು ಹೈರಾಣಾಗುತ್ತಾರೆ. ಹಾಗಾಗಿ ಸುರಕ್ಷತೆ, ದೀರ್ಘ ಬಾಳಿಕೆಗಾಗಿ ಗುಣಮಟ್ಟದ ವಸ್ತುಗಳನ್ನು ಹುಡುಕುವುದು ಗ್ರಾಹಕರ ಮೊದಲ ಕೆಲಸ ಆಗಿರುತ್ತದೆ. ಮನೆಯೊಂದನ್ನು ಕಟ್ಟಬೇಕಾದರೆ ಕಲ್ಲು, ಸಿಮೆಂಟ್, ಇಟ್ಟಿಗೆ, ಕಬ್ಬಿಣ ಹೀಗೆ ಎಲ್ಲ ವಸ್ತುಗಳು ಗುಣಮಟ್ಟದಿಂದ ಕೂಡಿರಬೇಕು. ಇಲ್ಲಿ ಒಂದಿಷ್ಟು ಎಚ್ಚರಿಕೆ ವಹಿಸುವುದು ಅಷ್ಟೇ ಮಹತ್ವದ್ದು ಕೂಡ.

ಸಿಮೆಂಟ್ ನಿರ್ಮಾಣ ಕ್ಷೇತ್ರದ ಪ್ರಮುಖ ಅಂಶ. ಮೊದಲೆಲ್ಲ ಸಾಮಾನ್ಯ ಸಿಮೆಂಟ್ ಬಳಕೆ ಮಾಡುತ್ತಿದ್ದರು. 33, 43 ಹಾಗೂ 53 ಗ್ರೇಡ್ ಪೋರ್ಟಲ್ಯಾಂಡ್ ಸಿಮೆಂಟ್ ಬಳಕೆ ಜಾಸ್ತಿ ಇತ್ತು. ಕ್ರಮೇಣ ಇತ್ತೀಚಿನ ದಿನಗಳಲ್ಲಿ ಬ್ಲೆಂಡೆಡ್ ಸಿಮೆಂಟ್‌ನತ್ತ ನಿರ್ಮಾಣೋದ್ಯಮ ಹೊರಳುತ್ತಿದೆ.
ಸ್ಟೀಲ್ ಇಂಡಸ್ಟ್ರಿಯ ಬೈ ಪ್ರೊಡಕ್ಟ್‌ಗಳನ್ನು ಬಳಕೆ ಮಾಡಿಕೊಂಡು ಈ ಸಿಮೆಂಟ್ ತಯಾರಿಸಲಾಗುತ್ತದೆ. ಸ್ಲ್ಯಾಗ್, ಗ್ರೌಂಡ್ ಗ್ರಾೃನುಲೇಟೆಡ್ ಬ್ಲಾಸ್ಟ್ ರ್ನೇಸ್-ಜಿಜಿಬಿಎಸ್, ್ಲೈ ಆ್ಯಶ್ (ಹಾರುಬೂದಿ) ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಬ್ಲೆಂಡೆಡ್ ಸಿಮೆಂಟ್ ತಯಾರಿಸಲಾಗುತ್ತದೆ. ಇದು ನಿರ್ಮಾಣ ಕ್ಷೇತ್ರಕ್ಕೆ ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದು ಅತಿ ಹೆಚ್ಚು ಎಂದರೆ 28 ದಿನದ ನಂತರವೂ ರಾಸಾಯನಿಕ ಕ್ರಿಯೆ ಮೂಲಕ ಮತ್ತಷ್ಟು ಬಲಿಷ್ಠಗೊಂಡು ಕಟ್ಟಡಕ್ಕೆ ಹೆಚ್ಚು ಶಕ್ತಿ ನೀಡುತ್ತದೆ. ಈ ಅಂಶಗಳು ಸಾಮಾನ್ಯ ಸಿಮೆಂಟ್‌ನಲ್ಲಿ ಇರುವುದಿಲ್ಲ. ಹಾಗಾಗಿ ಕಟ್ಟಡಕ್ಕೆ ದೀರ್ಘ ಬಾಳಿಕೆ ಇರುವುದಿಲ್ಲ.

ಏನಿದು ್ಲೈ ಆ್ಯಶ್?:್ಲೈ ಆ್ಯಶ್ ಅತ್ಯಂತ ತೆಳುವಾದ ಪೌಡರ್, ಕಲ್ಲಿದ್ದಲು ಗಣಿಯ ಬೈಪ್ರೊಡಕ್ಟ್ ಆಗಿದೆ. ಕಾರ್ಬನ್ ಒಳಗೊಂಡಿರುವುದರಿಂದ ಬೂದಿ ಬಣ್ಣದಲ್ಲಿ ಸಿಗುತ್ತದೆ. ಇದನ್ನು ಸಿಮೆಂಟ್ ಉತ್ಪಾದನೆಗೆ ಹೆಚ್ಚು ಬಳಕೆಯಾಗುತ್ತದೆ. ಸಾಮಾನ್ಯ ಸಿಮೆಂಟ್‌ಗಿಂತ ಇದನ್ನು ಬಳಸಿ ತಯಾರಿಸಿದ ಸಿಮೆಂಟ್ ಹೆಚ್ಚು ಗಟ್ಟಿ ಹಾಗೂ ದೀರ್ಘ ಬಾಳಿಕೆ ಬರುತ್ತದೆ ಎಂಬುದು ತಜ್ಞರ ಅಭಿಮತ.
ಹಾಗಾಗಿ ಬ್ಲೆಂಡೆಡ್ ಸಿಮೆಂಟ್ ತಯಾರಿಕೆಯಲ್ಲಿ ಹಾರುಬೂದಿಯನ್ನು ಶೇ.35ರ ವರೆಗೂ ಬಳಕೆ ಮಾಡಲಾಗುತ್ತದೆ. ಪರಿಸರಕ್ಕೆ ಹಾನಿ ಮಾಡಬಹುದಾದ ಈ ಉಪ ಉತ್ಪನ್ನವು ಸಿಮೆಂಟ್‌ಗೆ ಹೊಸ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ಸಂಶೋಧನೆ ಮೂಲಕ ಕಂಡುಕೊಳ್ಳಲಾಗಿದೆ.
ಸಾಮಾನ್ಯವಾಗಿ ಉತ್ಪಾದಿತ ಸಿಮೆಂಟ್ ಅನ್ನು ಕೂಡಲೇ ಬಳಕೆ ಮಾಡಬೇಕು. ಇಲ್ಲದೆ ಹೋದರೆ ಅದು ವಾತಾವರಣದಲ್ಲಿನ ನೀರಿನ ಅಂಶ ಹೀರಿಕೊಂಡು ಗಟ್ಟಿತನ ಕಳೆದುಕೊಳ್ಳುತ್ತದೆ. ಹಾಗಾಗಿ, ಸಿಮೆಂಟ್ ಬ್ಯಾಗ್ ಮೇಲೆ ಉತ್ಪಾದನೆಯಾದ ದಿನಾಂಕ, ಬ್ಯಾಚ್ ನಂಬರ್, ಕಂಪನಿ ಹೆಸರು ಇತ್ಯಾದಿಗಳನ್ನು ನೋಡಿಯೇ ಬಳಸಬೇಕು. ಈ ಮೂಲಕ ತಮ್ಮ ಕನಸಿನ ಮನೆ ಸುಂದರ ಹಾಗೂ ಸುರಕ್ಷಿತ ಮಾಡಿಕೊಳ್ಳುವುದು ಗ್ರಾಹಕರ ಕೈಯಲ್ಲಿದೆ ಎನ್ನುತ್ತಾರೆ ತಜ್ಞರು.

ಸುಣ್ಣದ ಕಲ್ಲು ಬಳಕೆ: ಸಾಮಾನ್ಯವಾಗಿ ಸಿಮೆಂಟ್ ತಯಾರಿಸಲು ಸುಣ್ಣದ ಕಲ್ಲು ಬಳಕೆಯಾಗುತ್ತೆ. ಸುಣ್ಣದ ಕಲ್ಲು ಮುಗಿದು ಹೋಗಬಹುದಾದ ನಿಕ್ಷೇಪಗಳಿಂದ ಬರುವಂಥದ್ದು. ಹಾಗಾಗಿ, ಸುಣ್ಣದ ಕಲ್ಲು ಬಳಸಿ ತಯಾರಿಸುವ ಸಿಮೆಂಟ್ ಬಳಕೆ ಕಡಿಮೆ ಮಾಡಿದರೆ ಮುಂದಿನ ಪೀಳಿಗೆಗೂ ಇದನ್ನು ಉಳಿಸಿಕೊಂಡು ಹೋಗಬಹುದು.
ಸಿಮೆಂಟ್‌ಗೆ ಪರ್ಯಾಯ ವಸ್ತು ನಿರ್ಮಾಣ ಕ್ಷೇತ್ರದಲ್ಲಿ ಇಲ್ಲ. ಹಾಗಾಗಿ ಮುಂದಿನ ಪೀಳಿಗೆಗಾಗಿ ಬ್ಲೆಂಡೆಡ್ ಸಿಮೆಂಟ್ ಬಳಕೆ ಜಾಸ್ತಿ ಮಾಡಬೇಕು. ಇಂಜಿನಿಯರ್‌ಗಳು ಕೂಡ ಈ ಬಗ್ಗೆ ಜಾಗೃತರಾಗಬೇಕು.್ಲೈ ಆ್ಯಶ್ ಬಳಕೆ ಮಾಡಿ ತಯಾರಾದ ಬ್ಲೆಂಡೆಡ್ ಸಿಮೆಂಟ್‌ನಿಂದ ಎರಡು ಲಾಭಗಳಿವೆ. ಪರಿಸರ ನಾಶ ತಪ್ಪಿಸುವ ಜತೆಗೆ ಕಟ್ಟಡಗಳ ಸುಭದ್ರತೆ ಗ್ಯಾರಂಟಿ ಸಿಗಲಿದೆ. ಸುಣ್ಣದ ಕಲ್ಲು ಬಳಕೆ ಕಡಿಮೆಯಾಗಿ ಮುಂದಿನ ಪೀಳಿಗೆಗೂ ಅಂತಹ ನಿಕ್ಷೇಪಗಳು ಉಳಿದುಕೊಳ್ಳುತ್ತವೆ. ಸಿಮೆಂಟ್ ಮಾತ್ರವಲ್ಲ, ಕಟ್ಟಡ ನಿರ್ಮಾಣ, ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಸಮಗ್ರ ಮಾಹಿತಿಗಾಗಿ ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಆಯೋಜಿಸಿರುವ ಪ್ರಾಪರ್ಟಿ ಎಕ್ಸ್‌ಪೋಕ್ಕೆ ಭೇಟಿ ನೀಡಿ. ಒಂದೇ ಸೂರಿನಲ್ಲಿ ಎಲ್ಲ ಮಾಹಿತಿಯೂ ನಿಮ್ಮ ಮುಂದೆ ಇರಲಿದೆ.

ನಿರ್ಣಾಯಕ ಆಯ್ಕೆ : ಮನೆಯನ್ನು ನಿರ್ಮಿಸುವುದು ಪ್ರಮುಖ ನಿರ್ಧಾರಗಳಿಂದ ತುಂಬಿದ ಪ್ರಯಾಣವಾಗಿದೆ ಮತ್ತು ಸರಿಯಾದ ಸಿಮೆಂಟ್ ಅನ್ನು ಆಯ್ಕೆ ಮಾಡುವುದು ಅತ್ಯಂತ ನಿರ್ಣಾಯಕ ಆಯ್ಕೆಗಳಲ್ಲಿ ಒಂದಾಗಿದೆ. ಸಿಮೆಂಟ್ ಯಾವುದೇ ನಿರ್ಮಾಣ ಯೋಜನೆಯ ಬೆನ್ನೆಲುಬಾಗಿದ್ದು, ಕಟ್ಟಡದ ಬಾಳಿಕೆ, ಶಕ್ತಿ ಮತ್ತು ದೀರ್ಘಾಯುಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಿಮೆಂಟ್ ಹೈಡ್ರಾಲಿಕ್ ಬೈಂಡರ್ ಆಗಿದ್ದು, ನೀರಿನೊಂದಿಗೆ ಬೆರೆಸಿದಾಗ ಅದರೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ಕಾಂಕ್ರಿಟ್ ಅಥವಾ ಗಾರೆಗಳ ಬಲಕ್ಕೆ ಕಾರಣವಾಗುವ ಸಂಯುಕ್ತಗಳನ್ನು ರೂಪಿಸುತ್ತದೆ.

ಮನೆ, ಅಪಾರ್ಟಮೆಂಟ್ ಕಟ್ಟಲು ಬಳಸುವ ಸಿಮೆಂಟ್ ಗುಣಮಟ್ಟದಿಂದ ಕೂಡಿರಬೇಕು. ಕಟ್ಟಡಗಳು ಹೆಚ್ಚು ಬಾಳಿಕೆ ಬರಬೇಕಾದರೆ ಒಂದಿಷ್ಟು ಮುಂಜಾಗ್ರತೆ ವಹಿಸಬೇಕು. ಇಂದಿನ ದಿನಮಾನಗಳಲ್ಲಿ ್ಲೆ ಆ್ಯಶ್ ಬಳಸಿ ಉತ್ಪಾದನೆ ಮಾಡಿದ ಬ್ಲೆಂಡೆಡ್ ಸಿಮೆಂಟ್ ಉಪಯೋಗಿಸಿದರೆ ಪರಿಸರ ಹಾಗೂ ಬಿಲ್ಡಿಂಗ್ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. >ಶ್ರೀವತ್ಸ ಎಸ್., ರೀಜನಲ್ ಹೆಡ್, ಟೆಕ್ನಿಕಲ್ ಕಸ್ಟಮರ್ ಸಲ್ಯುಷನ್ಸ್, ಅಲ್ಟ್ರಾಟೆಕ್ ಸಿಮೆಂಟ್ ಸಿಮೆಂಟ್ ಖರೀದಿಸುವಾಗ ತೇವಾಂಶದ ಸಂಪರ್ಕದಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಂಗ್ರಹಣೆ ಶೆಡ್ ನೆಲಮಟ್ಟದಿಂದ ಕನಿಷ್ಠ 150 ಮಿಮೀ ಎತ್ತರದಲ್ಲಿ ಇರಬೇಕು. ಗಾಳಿಯಾಡದ ಬಾಗಿಲು ಮತ್ತು ಕಿಟಕಿಗಳಿರಬೇಕು. ಸೈಟ್‌ನಲ್ಲಿ ಸಿಮೆಂಟ್ ಅನ್ನು ಎತ್ತರದ ವೇದಿಕೆ ಮೇಲೆ ಇರಿಸಬೇಕು ಮತ್ತು ಟಾರ್ಪಾಲಿನ್‌ನಿಂದ ಮುಚ್ಚಬೇಕು. >ಎಸ್.ಎಸ್. ಮೌರ್ಯ, ಹಿರಿಯ ಪ್ರಧಾನ ವ್ಯವಸ್ಥಾಪಕ, ಮಹಾ ಸಿಮೆಂಟ್, ಹೈದ್ರಾಬಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net