ಒಳ ಮೀಸಲಾತಿ ಜಾರಿ ಆದೇಶ ಸ್ವಾಗತಿಸಿ ಸಂಭ್ರಮ

20 PYP 01
ಒಳ ಮೀಸಲಾತಿ ವರ್ಗೀಕರಣದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿ ಪಿರಿಯಾಪಟ್ಟಣ ತಾಲೂಕು ಮಾದಿಗ ಸಂಘಟನೆಗಳ ಮುಖಂಡರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸೀಗೂರು ವಿಜಯಕುಮಾರ್, ಸಿ.ರಾಜು, ಭೂತನಳ್ಳಿ ಶಿವಣ್ಣ, ಚಪ್ಪರದಳ್ಳಿ ರವಿ ಇದ್ದರು.
Published on

ಪಿರಿಯಾಪಟ್ಟಣ : ಒಳ ಮೀಸಲಾತಿ ವರ್ಗೀಕರಣದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಿಸಿ ತಾಲೂಕು ಮಾದಿಗ ಸಂಘಟನೆಗಳ ಮುಖಂಡರು ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಆದಿಜಾಂಬವ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಸೀಗೂರು ವಿಜಯಕುಮಾರ್ ಮಾತನಾಡಿ, ಮಾದಿಗ ಸಂಘಟನೆಗಳು ಹಲವು ದಶಕಗಳಿಂದ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಸಾಕಷ್ಟು ಚಳವಳಿಗಳನ್ನು ಮಾಡಿದ್ದವು ಹಾಗೂ ನ್ಯಾಯಾಲಯದಲ್ಲಿಯೂ ಕೂಡ ಈ ಬಗ್ಗೆ ಸಾಕಷ್ಟು ವಾದ ಮಂಡನೆ ಮಾಡಲಾಗಿತ್ತು. ಅಂತಿಮವಾಗಿ ಕೇಂದ್ರದ ಉನ್ನತ ನ್ಯಾಯಾಲಯ ರಾಜ್ಯ ಸರ್ಕಾರಗಳು ಅತಿ ಶೀಘ್ರದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಸೂಚನೆ ನೀಡಿದ್ದು ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾದಿಗ ಸಮುದಾಯದ ಎಡಗೈ ಸಮುದಾಯಕ್ಕೆ ಶೇ. 6ರಷ್ಟು ಒಳ ಮೀಸಲಾತಿಯನ್ನು ನೀಡಿದೆ. ಈ ನಿರ್ಧಾರವನ್ನು ಮಾದಿಗ ಸಮುದಾಯದ ಪ್ರತಿಯೊಬ್ಬರೂ ಸ್ವಾಗತಿಸುತ್ತೇವೆ ಎಂದರು. ಇದಕ್ಕಾಗಿ ಶ್ರಮಿಸಿದ ಸಚಿವರು, ಶಾಸಕರು ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಪೌರಕಾರ್ಮಿಕ ಮುಖಂಡ ಸಿ.ರಾಜು ಮಾತನಾಡಿ, ಹಕ್ಕು ಮತ್ತು ಅವಕಾಶಗಳಿಗಾಗಿ ಅನೇಕ ವರ್ಷಗಳಿಂದ ಸಮುದಾಯಗಳು ಹೋರಾಟ ಮಾಡುವುದರ ಮೂಲಕ ಇಂದು ಯಶಸ್ವಿ ಸಾಧಿಸಿದ್ದೇವೆ. ಸಮುದಾಯದ ಒಗ್ಗಟಿನಿಂದ ಯಾವುದೇ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಇಂದಿನ ಆದೇಶ ತೋರಿಸಿಕೊಟ್ಟಿದೆ ಎಂದರು.

ಸಂಘದ ಗೌರವಾಧ್ಯಕ್ಷ ಭೂತನಳ್ಳಿ ಶಿವಣ್ಣ, ಅಧ್ಯಕ್ಷ ಚಪ್ಪರದಳ್ಳಿ ರವಿ, ಉಪಾಧ್ಯಕ್ಷ ದೇಪುರ ಕುಮಾರ್, ಕಾರ್ಯದರ್ಶಿ ರಮೇಶ್, ಖಜಾಂಚಿ ಜಯಸ್ವಾಮಿ, ಗ್ರಾ ಪಂ ಅಧ್ಯಕ್ಷ ಸಣ್ಣ ತಮ್ಮಯ್ಯ, ಸದಸ್ಯ ನರಸಿಂಹ ಮೂರ್ತಿ, ತಾಪಂ ಮಾಜಿ ಸದಸ್ಯ ಚಂದ್ರು, ಮುಖಂಡರಾದ ಅಂಬಾರಿ ಪ್ಯಾಲೇಸ್ ಮಾಲೀಕ ರವಿ, ಮಾದೇವ, ಬಸವರಾಜ್, ಆರ್.ಡಿ.ಚಂದ್ರು, ಕುಮಾರ್, ವಿಷ್ಣು, ಆನಂದ್, ಮಹೇಶ್, ಆದಿಶೇಷ, ನಾಗರಾಜ್, ನಾರಾಯಣ, ಚನ್ನಯ್ಯ, ಸ್ವಾಮಿ, ಕಿರಣ್, ವಾಜೀದ್ ಪಾಶ, ಕಾಳಣ್ಣ, ರಘು, ಕಾರ್ತಿಕ್, ಚನ್ನಕೇಶವ, ಲೋಕೇಶ್, ಸುಬ್ಬಣ್ಣ, ಅಶೋಕ್, ಸುರೇಶ್, ನಾಗೇಂದ್ರ, ಗಿರೀಶ್ ಇತರರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net