

ನೆಲಮಂಗಲ : ಸೋಲೂರು ಹೋಬಳಿ ನೆಲಮಂಗಲ ವಿಧಾನಸಭಾ ೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ೇತ್ರ ಸೇರಿದ್ದು, ಆಡಳಿತಾತ್ಮಕವಾಗಿ ಮಾಗಡಿ ತಾಲೂಕು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿತ್ತು. ಶಾಸಕ ಎನ್.ಶ್ರೀನಿವಾಸ್ ಆ ಭಾಗದ ಜನರ ಸಮಸ್ಯೆಗಳ ಬಗ್ಗೆ ಸದನದಲ್ಲೂ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದರು. ಇದೀಗ ಏಳೆಂಟು ದಶಕಗಳ ಸಮಸ್ಯೆಗೆ ಮುಕ್ತಿ ದೊರೆತಿದ್ದು, ಜನರಲ್ಲಿ ಸಂಭ್ರಮ ಮನೆ ಮಾಡಿದೆ. ಸೋಲೂರು ಸೇರಿ ವಿಧಾನಸಭಾ ೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಭಿವೃದ್ಧಿಗೆ ಸಹಕಾರ: ಸೋಲೂರು ಹೋಬಳಿ ಆಡಳಿತಾತ್ಮಕವಾಗಿ ಮಾಗಡಿ ತಾಲೂಕು ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿತ್ತು. ಅಭಿವೃದ್ಧಿ ವಿಚಾರವಾಗಿ ಮಾಗಡಿ ತಾಲೂಕು ಕುದೂರು ಹೋಬಳಿಗೆ ನೀಡುತ್ತಿದ್ದ ಪ್ರಾತಿನಿಧ್ಯ ಸೋಲೂರು ಹೋಬಳಿಗೆ ಸಿಗುತ್ತಿರಲಿಲ್ಲ. ಈಗ ಆಡಳಿತಾತ್ಮಕವಾಗಿ ಒತ್ತು ನೀಡುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಮಠಾಧೀಶರಿಂದ ಮೆಚ್ಚುಗೆ: ವಿಧಾನಸಭಾ ೇತ್ರ ವ್ಯಾಪ್ತಿಯಲ್ಲಿ ಹಲವು ವೀರಶೈವಲಿಂಗಾಯತ ಮಠಗಳ ಮಠಾಧೀಶರು ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹೋಬಳಿ ಜನರ ಋಣ ತೀರಿಸಿದ ತೃಪ್ತಿ ದೊರೆತಿದೆ ಎಂದು ಶಾಸಕ ಎನ್.
ಶ್ರೀನಿವಾಸ್ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಿಂದ ಸನ್ಮಾನ: ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಅರಿಶಿಣಕುಂಟೆ ಬಳಿ ಸಮಾವೇಶಗೊಂಡು ಶಾಸಕ ಎನ್.ಶ್ರೀನಿವಾಸ್ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸನ್ಮಾನಿಸಿದರು. ಮೊದಲಿಗೆ ಡಿಸಿಎಂ ನಿವಾಸ, ನಂತರ ಕೃಷ್ಣಾದಲ್ಲಿ ಸಿಎಂ.ಸಿದ್ದರಾಮಯ್ಯ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಳಿಕ ಶಾಸಕರ ಭವನದಲ್ಲಿ ಎಂ.ಎಲ್ಸಿ ರವಿ ಅವರನ್ನು ಸನ್ಮಾನಿಸಿದರು. ಸೋಲೂರು ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಶಾಸಕರು ಸೇರಿ ಆ ಭಾಗದ ಮುಖಂಡರು, ಕಾರ್ಯಕರ್ತರ ಜತೆಗೆ ಜನರಿಗೂ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹರಸಿದರು. ಶಾಸಕ ಶ್ರೀನಿವಾಸ್ ಹಾಗೂ ಸೋಲೂರು ಭಾಗದ ಕಾರ್ಯಕರ್ತರ ಒತ್ತಾಸೆಯಂತೆ ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡಲಾಗಿದ್ದು, ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಜನರ ಆಶೋತ್ತರಗಳನ್ನು ಈಡೇರಿಸುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಸೋಲೂರು ಜನರ ಕಷ್ಟ ಪರಿಹಾರವಾಗಿದೆ. ನೆಲಮಂಗಲ ನಗರದ ಬಸ್ ನಿಲ್ದಾಣ ಅಭಿವೃದ್ಧಿ ಹಾಗೂ ಇನ್ನಿತರ ವಿಚಾರಗಳನ್ನು ಸೆ. 11 ರಂದು ಸಭೆ ನಡೆಸಿ ಪರಿಹಾರ ಒದಗಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ತಿಳಿಸಿದರು.