ಕಾರ್ಗಿಲ್ ಸ್ತೂಪ ಬಳಿ ಸಂಭ್ರಮಾಚರಣೆ

7 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಹಲ್ಗಾಮ್​ ಪ್ರತಿಕಾರವಾಗಿ ಭಾರತೀಯ ಸೈನಿಕರು ಆಪರೇಷನ್​ ಸಿಂಧೂರ ನಡೆಸಿದ ಹಿನ್ನೆಲೆಯಲ್ಲಿ ನಗರದ ಕಾರ್ಗಿಲ್ ಸ್ತೂಪದ ಬಳಿ ಸಂಭ್ರಮಾಚರಣೆ ನಡೆಸಲಾಯಿತು.

ಪಹಲ್ಗಾಮ್​ದಲ್ಲಿ ಅಮಾಯಕ ಹಿಂದುಗಳನ್ನು ಗುರಿಯಾಗಿಸಿಕೊಂಡು ಉಗ್ರರು ಹತ್ಯೆ ಮಾಡಿದ್ದರು. ಇದಕ್ಕೆ ಭಾರತದ ಸೈನಿಕರು ಆಪರೇಷನ್​ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ ಪಾಕ್​ ಪ್ರೇರಿತ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿ ನೂರಾರು ಉಗ್ರರನ್ನು ಸಂಹಾರ ಮಾಡಿದೆ. ಇದೊಂದು ಸಂತಸದ ಕ್ಷಣ.

ಭಾರತೀಯ ಸೇನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿವೃತ್ತ ಯೋಧರ ಸಂಪೂರ್ಣ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಸಹ ನಡೆಸುವ ಉಗ್ರರ ಸಂಹಾರ ಕಾರ್ಯಕ್ಕೆ ಕಾರ್ಗಿಲ್ ವಿಜಯ ಸ್ಮಾರಕ ಸಮಿತಿ ಸದಸ್ಯರು, ಸಮಸ್ತ ಭಾರತೀಯರ ಬೆಂಬಲವಿದೆ. ಭಾರತೀಯ ಸೇನೆ ಉಗ್ರರನ್ನು ಬೇರು ಸಮೇತ ನಾಶಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಿವೃತ್ತ ಮೇಜರ್​ ಶಿವರೆಡ್ಡಿ ದಾನರೆಡ್ಡಿ, ಎಸ್​.ಸಿ. ಹಿರೇಮಠ, ಜೆ.ಸಿ.ಶಿರಿಯಣ್ಣವರ, ಎಂ.ಎಸ್​. ಪೂಜಾರ, ಸಮಿತಿಯ ಉದಯ ಯಂಡಿಗೇರಿ, ಪಂಡಿತ್​ ಮುಂಜಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net