

ಬೆಟ್ಟದಪುರ: ಬೆಟ್ಟದಪುರದ ವೃತ್ತದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಒಡೆಯರ್ ಗೆಲುವಿನ ಹಿನ್ನೆಲೆ ಮಂಗಳವಾರ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಬೆಟ್ಟದಪುರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೈಲಾರಿ, ಕಾರ್ಯದರ್ಶಿ ಅರುಣ್ ರಾಜೇಅರಸ್, ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ್ಷೆ ಪ್ರೀತಿ ಅರಸ್, ಮುಖಂಡ ಪಟೇಲ್ ನಟೇಶ್, ಅಶ್ವಥ್, ಶಿವಶಂಕರ್, ಗಣೇಶ್, ಮನೋಹರ್ ಇದ್ದರು.