ಸಂಭ್ರಮದ ಯರಗಟ್ಟಿ ಅಯ್ಯಪ್ಪಸ್ವಾಮಿ ಮಹಾಪೂಜೆ

18YARAGATTI1
Published on

ಯರಗಟ್ಟಿ: ಪಟ್ಟಣದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 11ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಪಡಿಪೂಜೆ, ಅನ್ನಸಂತರ್ಪಣೆ ನೆರವೇರಿಸಲಾಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜ್ಯೋತಿಯಾತ್ರೆಗೆ ಬಸವೇಶ್ವರ ದೇವಸ್ಥಾನದಿಂದ ದೀಪಾಲಂಕತ ಮೆರವಣಿಗೆ ಜರುಗಿತು.

ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಯ್ಯಪ್ಪಸ್ವಾಮಿಯ ಭಕ್ತರ ಸಮ್ಮುಖದಲ್ಲಿ ಅಮ್ಮಿನಬಾವಿ ನಾರಾಯಣ ಗುರುಸ್ವಾಮಿ ನೇತತ್ವದಲ್ಲಿ ಹಾಗೂ ಅಯ್ಯಪ್ಪ ಮಾಲಾಧಾರಿಗಳಿಂದ ಮಹಾಪೂಜೆ ಜರುಗಿತು.

18ನೇ ವರ್ಷದ ಮಾಲಾಧಾರಿಗಳಿಗೆ ಗುರುವಂದನೆ ಮತ್ತು ಸನ್ಮಾನ ಜರುಗಿತು.

ಕೆ.ಚಂದರಗಿ ಬಸವರಾಜ ಗುರುಸ್ವಾಮಿ, ಗುರುಸ್ವಾಮಿಗಳಾದ ಅಶೋಕ, ಸುರೇಶ, ವಿಕ್ರಮ, ವಿಜಯ, ಬಂಗಾರೆಪ್ಪ, ಈರಣ್ಣ ಗುರುಸ್ವಾಮಿ ಹಾಗೂ ಮಾಲಾಧಾರಿಗಳಾದ ಮಂಜುನಾಥ ಬಿಡ್ಲಿ, ಯಲ್ಲಪ್ಪ ದಾನ್ನನವರ, ಈರಣ್ಣ ಜಾಡಿ, ಉದ್ದಪ್ಪ ಹಾರುಗೊಪ್ಪ, ರುದ್ರಪ್ಪ ಮಾದರ, ಮಹೇಶ ಕಡಕೋಳ, ಗದಿಗೆಪ್ಪ ಗಲಬಿ, ರಾಜು ವಾಲಿ, ಪುಟ್ಟು ಪುಜೇರ ಸೇರಿದಂತೆ ಸುತ್ತಲಿನ ಗ್ರಾಮಗಳ ಗುರುಸ್ವಾಮಿಗಳು, ಮಾಲಾಧಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net