ಸಂಭ್ರಮದ ಶ್ರೀ ಮಹಾಲಕ್ಷ್ಮೀ ಮಂದಿರ ವಾಸ್ತುಪೂಜೆ

web5
ಮಾಂಜರಿ ಸಮೀಪದ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯಲ್ಲಿ ಹಮ್ಮಿಕೊಂಡಿದ್ದ ನೂತನ ಶ್ರೀಮಹಾಲಕ್ಷ್ಮೀದೇವಿ ಮಂದಿರದ ವಾಸ್ತುಪೂಜೆ ಕಾರ್ಯಕ್ರಮ ನಡೆಯಿತು. ಮಲ್ಲಿಕಾರ್ಜುನ ಕೋರೆ, ಅಮೀತ ಕೋರೆ, ತಾತ್ಯಾಸಾಹೇಬ ಕಾಟೆ ಇತರರಿದ್ದರು.
Published on

ಮಾಂಜರಿ: ಸಮೀಪದ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆ

ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಮಹಾಲಕ್ಷ್ಮೀ ದೇವಿ ಮಂದಿರದ ವಾಸ್ತು ಪೂಜೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಸುಮಂಗಲೆಯರ ಕುಂಭಮೇಳ ದೊಂದಿಗೆ ಮೂರ್ತಿಯ ಮೆರವಣಿಗೆ ನಡೆಯಿತು. ಡೊಳ್ಳು ಬಾರಿಸಿ ನಾಣ್ಯ ಸರಿಸುವ ಸ್ಪರ್ಧೆ ಹಾಗೂ ಕುದುರೆ-ಎತ್ತಿನ ಗಾಡಿ ಶರ್ಯತ್ತುಗಳು ಜರುಗಿದವು.

ಶ್ರೀಮಹಾಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಸದಲಗಾದ ಡಾ.ಶ್ರದ್ಧಾನಂದ ಸ್ವಾಮೀಜಿ, ಸವದತ್ತಿಯ ಶಿವಶಂಕರ ಸ್ವಾಮೀಜಿ, ನಂದಿಕುರಳಿಯ ಜಯದೇವ ವೀರಭದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿತು.

ಬಳಿಕ ಮಹಿಳೆಯರಿಗೆ ಉಡಿ ತುಂಬುವುದು, ಹೋಮಹವನ ಹಾಗೂ ಮಹಾಪ್ರಸಾದ ನಡೆಯಿತು. ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಅಧ್ಯಕ್ಷತೆ ವಹಿಸಿದ್ದರು. ದೆಹಲಿಯ ರಾಷ್ಟ್ರೀಯ ಸಕ್ಕರೆ ಕಾರ್ಖಾನೆಗಳ ಹಾಗೂ ಕೋರೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮೀತ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net