ಸಂಭ್ರಮದಲ್ಲಿ ಪುನರುತ್ಥಾನ ದಿನದ ಆಚರಣೆ

IMG-20250413-WA0067.jpg
Published on

ಚಿಕ್ಕಬಳ್ಳಾಪುರ: ನಗರದಲ್ಲಿ ಕ್ರೈ ಸ್ತರು ಸಾಮೂಹಿಕ ಪ್ರಾರ್ಥನೆ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸೇರಿದಂತೆ ವಿವಿಧ ಚಟುವಟಿಕೆಯೊಂದಿಗೆ ಏಸುವಿನ ಪುನರುತ್ಥಾನದ ದಿನವನ್ನು (ಈಸ್ಟರ್ ಡೇ) ಭಾನುವಾರ ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ನಗರದ ಸೆಂಥ್ ಕ್ಸೇವಿಯರ್, ಸಿಎಸ್ಐ ಸೇರಿ ಹಲವು ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ನಡೆದವು. ಬಗೆಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ಚರ್ಚಿಗೆ ಆಗಮಿಸಿ ಕ್ರಿಸ್ತನ ಸಂದೇಶಗಳನ್ನು ಆಲಿಸಿದರು. ಶಿಲುಬೆಗೇರಿಸಿ ಸಮಾಧಿ ಮಾಡಿದ ಮೂರು ದಿನಗಳ ಬಳಿಕ ಏಸು ಕ್ರಿಸ್ತನು ಪ್ರತ್ಯವಾಗಿ ದೇವರನ್ನು ಸೇರಿದ ದಿನದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಪುನರುತ್ಥಾನ ಹಬ್ಬ ಆಚರಿಸಲಾಗುತ್ತದೆ. ಇದನ್ನು ಕರ್ಜೂರ ಗರಿಗಳ ಹಬ್ಬ ಎಂತಲೂ ಕರೆಯಲಾಗುತ್ತದೆ.  

*ಸಾಮೂಹಿಕ ಮೆರವಣಿಗೆ
ಯೇಸು ಕ್ರಿಸ್ತನ ಜೀವನದ ಕೊನೆಯ ಅವಧಿಯಲ್ಲಿನ ಶಿಲುಬೆ ಯಾತ್ರೆ, ಶಿಲುಬೆಯ ಮೇಲೆ ಮರಣ ಮತ್ತು ಮರಣದ ಬಳಿಕ ಪುನರುತ್ಥಾನದ ದೃಶ್ಯ ವೈಭವವನ್ನು ಪ್ರದರ್ಶಿಸಲಾಯಿತು. ಸಾಮೂಹಿಕ ಮೆರವಣಿಗೆಯಲ್ಲಿ ಕತ್ತೆಯ ಮೇಲೆ ಕುಳಿತು ಪ್ರಯಾಣ, ದಿವ್ಯ ಸಂದೇಶ, ಶಿಲುಬೆಯನ್ನು ಹೊತ್ತು ಸಾಗುವುದನ್ನು ಸ್ಥಳಿಯ ಜನರು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net