ಸಂಭ್ರಮದ ರಾಮಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ

kldg 22-2 pooje
ಕಲಾದಗಿ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
Published on

ಕಲಾದಗಿ: ಗ್ರಾಮ ಸಮೀಪದ ಸಂಶಿ ಕ್ರಾಸ್‌ನಲ್ಲಿರುವ ಶ್ರೀ ರಾಮಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ ನಿಮಿತ್ತ ಬುಧವಾರ ವಾಸುದೇವ ಮಮದಾಪುರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ರಾಮಾಂಜನೇಯ ಮೂರ್ತಿಗೆ ಬೆಳಗ್ಗೆ ಗಂಗಾ ಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿಶೇಷ ನೈವೇದ್ಯ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಸೋಮವಾರದಿಂದ ಬುಧವಾರವರೆಗೆ 35ಕ್ಕೂ ಹೆಚ್ಚು ರಾಮಭಕ್ತರಿಂದ ರಾಮಮಾಲೆ ಧರಿಸಿ ಭಜನೆ, ಕೀರ್ತನೆಗಳ ಮೂಲಕ ಅಂದಾಜು 10,000 ರಾಮನಾಮ ಜಪ ಮಾಡಲಾಗಿತ್ತು. ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ದೇವಸ್ಥಾನ ಆವರಣದಲ್ಲಿ ಮಾತೆಯರು ಹಾಗೂ ಗ್ರಾಮದ ಮುಖಂಡರಿಂದ ಕಾರ್ತಿಕೋತ್ಸವ ಹಾಗೂ ಮಹಾಮಂಗಳಾರತಿ ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net