ಸಂಭ್ರಮದ ತೋಂಟದಾರ್ಯ ಮಠದ ರಥೋತ್ಸವ

26 DBL - 1 (3)
Published on

ಡಂಬಳ: ಇಲ್ಲಿನ ತೋಂಟದಾರ್ಯ ಮಠದ ಮಹಾರಥೋತ್ಸವ ವಿವಿಧ ವಾದ್ಯ ಮೇಳದೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಜನರು ತೇರಿಗೆ ಉತ್ತತ್ತಿ, ಬಾಳೆಹಣ್ಣು, ಬೆಂಡು, ಬೆತ್ತಾಸ ಎಸೆದು ಭಕ್ತರು ಭಕ್ತಿ ಅರ್ಪಿಸಿದರು. ತೇರಿನ ಮುಂದೆ ಸಿದ್ಧಲಿಂಗೇಶ್ವರರು ರಚಿಸಿದ ಷಟಸ್ಥಲ ಜ್ಞಾನ ಸಾರಾಮೃತ ಹಾಗೂ ಬಸವಣ್ಣವರ ವಚನದ ಕಟ್ಟುಗಳನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಯಿತು.

ಜಾಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ, ಉಪಾಧ್ಯಕ್ಷ ರೇವಣ್ಣಸಿದ್ದಪ್ಪ ಕರಿಗಾರಿ, ಜಿ.ವಿ. ಹಿರೇಮಠ, ತೋಂಟದಾರ್ಯ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ, ಮಂಜುನಾಥ ಸಂಜೀವಣ್ಣವರ, ಕುಬೇರಪ್ಪ ಬಂಡಿ, ಮರಿತೆಮ್ಮಪ್ಪ ಆದಮ್ಮನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net