

ಮೂಲ್ಕಿ: ಯೇಸುಕ್ರಿಸ್ತರ ಬೋಧನೆಗಳು ಜೀವನ ಸತ್ಯವಾಗಿದ್ದು ಅವು ಸರ್ವಕಾಲಿಕ ಪ್ರಸ್ತುತ ಎಂದು ಸ್ಮಾಲ್ ಕ್ರಿಶ್ಚಿಯನ್ ಕಮ್ಯುನಿಟಿ ಮಂಗಳೂರು ವಿಭಾಗದ ನಿರ್ದೇಶಕ ಸುನೀಲ್ ಡಿಸೋಜ ಹೇಳಿದರು.
ಮೂಲ್ಕಿ ಇಮ್ಯಾಕ್ಯುಲೇಟ್ ಕಂಸೇಪ್ಶನ್ ಚರ್ಚ್‌ನಲ್ಲಿ ಗುರುವಾರ ಯೇಸುಕ್ರಿಸ್ತರ ಕೊನೆಯ ರಾತ್ರಿ ಭೋಜನದ ಆಚರಣೆಯಲ್ಲಿ ಮಾತನಾಡಿದರು.
ಗುಡ್ ಫ್ರೈಡೇ ಪೂರ್ವಭಾವಿಯಾಗಿ ಗುರುವಾರ ರಾತ್ರಿ ಯೇಸುಕ್ರಿಸ್ತರು ತಮ್ಮ ಶಿಷ್ಯರ ಕಾಲುಗಳನ್ನು ತೊಳೆದು ತನ್ನ ಸೊಂಟಕ್ಕೆ ಸುತ್ತಿದ ವಸ್ತ್ರದಿಂದ ಒರೆಸಿ ಗುರುವಾದ ನಾನು ನಿಮಗೆ ಗೌರವ ನೀಡಿದ್ದೇನೆ ನೀವುಗಳು ಇತರರನ್ನು ಗೌರವಿಸಿ ಎಂದು ಆದೇಶವಿತ್ತರು.
ಮೂಲ್ಕಿ ಚರ್ಚ್ ಧರ್ಮಗುರು ಅಂಟನಿ ಶೇರಾ ಈ ಆಚರಣೆಯಂತೆ ಶಿಷ್ಯರ ಕಾಲು ತೊಳೆದು ಗೌರವಿಸಿದರು. ಬಳಿಕ ಕ್ರಿಸ್ತರ ಕೊನೆಯ ರಾತ್ರಿಭೋಜನದ ವಿಧಿ ಆಚರಿಸಲಾಯಿತು.
ಮೂಲ್ಕಿ ಡಿವೈನ್ ಕಾಲ್ ಸೆಂಟರ್ ಅನಿಲ್ ಕಿರಣ್ ಫರ್ನಾಂಡಿಸ್, ವಾಲ್ಟರ್ ಮೆಂಡೋನ್ಸಾ, ಮಾರ್ಕ್ ಮಥಾಯಿಸ್, ಡೋನಾಲ್ಡ್ ಡಿಸಿಲ್ವಾ, ಸುಶೀಲ್ ಪೂಜಾ ವಿಧಿಗಳಲ್ಲಿ ಭಾಗಿಯಾದರು. ಮೂಲ್ಕಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಎಡ್ವಿನ್ ಡಿಸೋಜ, ವಾರ್ಡ್‌ಗಳ ಗುರಿಕಾರರು, ಧರ್ಮಸಭಾ ಸದಸ್ಯರು ಹಾಜರಿದ್ದರು.