

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಸುಕ್ಷೇತ್ರ ಕರವಿನಾಳ ಗ್ರಾಮದಲ್ಲಿ ಗ್ರಾಮದೇವತೆ ಶ್ರೀದೇವಿ ಜಾತ್ರೆ ಶುಕ್ರವಾರ ಸಂಭ್ರಮದಿಂದ ನಡೆಯಿತು.
ಬೆಳಗ್ಗೆ ಕುಂಭ ಮೆರವಣಿಗೆಯೊಂದಿಗೆ ಶ್ರೀದೇವಿಗೆ ಉಡಿ ತುಂಬ ಕಾರ್ಯಕ್ರಮ ಹಾಗೂ ರಥೋತ್ಸವ ಜರುಗಿತು. ಗ್ರಾಮದ ಶ್ರೀದೇವಿಯ ದೇವಸ್ಥಾನದಿಂದ ಗಂಗಾ ಸ್ಥಳಕ್ಕೆ ತೆರಳಿ ನಂತರ ಪ್ರಮುಖ ಬೀದಿಯಲ್ಲಿ ಡೊಳ್ಳಿನ ವಾಲಗ, ಮೆರವಣಿಗೆ ಮೂಲ ದೇವಸ್ಥಾನಕ್ಕೆ ಬಂದು ತಲುಪಿತು. ಸಾವಿರಾರು ಭಕ್ತರು ಶ್ರೀದೇವಿ ಆಶೀರ್ವಾದ ಪಡೆದು ಪುನೀತರಾದರು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪ್ರಮುಖರಾದ ವಿಜುಗೌಡ ಬಿರಾದಾರ, ಬಾಬುಗೌಡ ಪಾಟೀಲ, ಲಕ್ಷ್ಮಿಪುತ್ರ ಬಡಿಗೇರ, ಅಮೀನಸಾಬ ಮುಲ್ಲಾ, ಮನೋಹರ ವಿಶ್ವಕರ್ಮ, ಕಾಳಪ್ಪ ವಿಶ್ವಕರ್ಮ, ಸಂಜುಕುಮಾರ ಪತ್ತಾರ, ಗುರುರಾಜ ಬೈರಿ, ಮಂಜು ಪತ್ತಾರ, ನೀಲಪ್ಪಗೌಡ ಬಿರಾದಾರ, ಬಸವರಾಜ ದೇಸಾಯಿ, ಸಲೀಂ ನಡುವಿನಮನಿ, ಪುಂಡಲೀಕ ರಾಠೋಡ, ಬಸವರಾಜ ಮಾರಲಭಾವಿ, ಸೈಯದ್ ಮುಲ್ಲಾ, ಅಮೀನಸಾಬ ಬಮ್ಮನಜೋಗಿ, ಗುರು ಬಗಲಿ, ನಾನಾಗೌಡ ಬಿರಾದಾರ, ಸಂಗು ಬೈರಿ, ಹಣಮಂತರಾಯಗೌಡ ಬಿರಾದಾರ, ಅನಿಲ ಚವ್ಹಾಣ, ಶಿವಾನಂದ ರಾಠೋಡ, ಅಮೀನಸಾಬ ಮೇಲಿನಮನಿ, ಯಾಕೋಬ ದೊಡ್ಡಮನಿ ಇತರರಿದ್ದರು.