ಸಂಭ್ರಮದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ

03 HKR 04 VEERBHADRA JAYANTI
Published on

ಹಿರೇಕೆರೂರ: ಪಟ್ಟಣದ ತೋಂಟದ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಮಂಗಳವಾರ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲಾಯಿತು.

ಜಯಂತಿ ನಿಮಿತ್ತ ಪ್ರಶಾಂತಯ್ಯಶಾಸ್ತ್ರೀ ಹಿರೇಮಠ, ಈರಣ್ಣಯ್ಯ ಹಿರೇಮಠ ಅವರಿಂದ ವೀರಭದ್ರೇಶ್ವರ ದೇವರಿಗೆ ಬೆಳಗ್ಗೆ ರುದ್ರಾಭಿಷೇಕ, ಹೂವಿನ ಅಲಂಕಾರ ಪೂಜೆ, ತೀರ್ಥಪ್ರಸಾದ, ಮಹಾಮಂಗಳಾರತಿ ನೆರವೇರಿಸಿದರು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯದೊಂದಿಗೆ ದೇವರ ಪಾಲಕಿ ಉತ್ಸವ ಮೆರವಣಿಗೆ ಸಂಚರಿಸಿ, ದೇವಸ್ಥಾನಕ್ಕೆ ಮರಳಿ ಆಗಮಿಸಿತು. ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜಯಂತಿ ಕಾರ್ಯಕ್ರಮ ಮಂಗಲಗೊಂಡಿತು.

ಜಯಂತಿ ಕಮಿಟಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಹಳಕಟ್ಟಿ, ರಾಕೇಶ ಶೆಟ್ಟರ, ಸಂತೋಷ ವಾಲಿ, ಇರಣ್ಣ ಹಾದ್ರಿಹಳ್ಳಿ, ಗಣೇಶ ಹಳಕಟ್ಟಿ, ಚಿನ್ಮಯಿ ಹಳಕಟ್ಟಿ, ಪ್ರಜ್ವಲ್ ಕೋರಿಶೆಟ್ಟರ, ಸತೀಶ ಕೋರಿಗೌಡ್ರ, ಕೊಟ್ರೇಶಣ್ಣ ಹಳಕಟ್ಟಿ, ಕುಮಾರ ವಾಲಿ, ಚಂದ್ರಣ್ಣ ಹಲವಾಗಿಲ, ಪ್ರಕಾಶ ಮಾಲ್ವಿ, ಶಂಕ್ರಪ್ಪ ಕೋರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net