

ರಾಯಚೂರು ಕ್ಷತ್ರಿಯ ಸೂರ್ಯನಾರಾಯಣ ಜಯಂತಿಯನ್ನು ಆಚರಿಸುತ್ತಿದ್ದು, ಜಯಂತಿ ಸಮಾಜಕ್ಕೆ ಸಿಮೀತಗೊಳಿಸದೇ
ಎಲ್ಲಾ ಸಮುದಾಯದಗಳ ಆಚರಿಸಬೇಕಾಗಿದೆ, ಇದರಿಂದ ಒಗ್ಗಟ್ಟು ಪ್ರದರ್ಶನವಾಗುತ್ತದೆಂದು ಹಿಂದುಗಳ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ನಗರದ ಆರ್ಯ ಸಮಾಜದ ಮಂದಿರದಲ್ಲಿ ಮಂಗಳವಾರ ಸೂರ್ಯವಂಶ ಕ್ಷತ್ರಿಯ ಕಾಟಿಕ್ ಸಮಾಜದ ವತಿಯಿಂದ ಹಮ್ಮಿಕೊಂಡ ರಥ ಸಪ್ತಮಿ ಶ್ರೀ ಸೂರ್ಯನಾರಾಯಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಅನೇಕ ಸಮುದಾಯಗಳಿಗೆ ಇತಿಹಾಸವಿದೆ, ಕಾಟಿಕ ಸಮಾಜಕ್ಕೂ ಒಂದು ಇತಿಹಾಸವಿದೆ, ಇತಿಹಾಸವನ್ನು ನಾವು ಮರೆಯಬಾರದು, ದೇಶದಲ್ಲಿ ಅನೇಕ ರಾಜಮನೆತನಗಳು ಆಳಿವೆ, ಇದೀಗ ದೇಶದಲ್ಲಿ ಪ್ರಜಾಪ್ರಭುತ್ವ ಇದೆ, ಡಾ.ಬಿ.ಆರ್.ಅಂಬೇಡ್ಕರ್ ರವರು ನಮಗೆ ಸಂವಿಧಾನ ಕೊಟ್ಟು ಸೌಲಭ್ಯಗಳನ್ನು ನೀಡಿದ್ದಾರೆ. ಆದರೆ ಸೌಲಭ್ಯಗಳು ಸಮುದಾಯಗಳಿಗೆ ದೊರೆಯುತ್ತಿಲ್ಲ ಎಂದರು.
ನಾವೆಲ್ಲರೂ ಶರಣ ಹಾದಿಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲು ಎಲ್ಲಾ ಸಮುದಾಯಗಳ ಜಯಂತಿಗಳ ನ್ನು ಆಚರಣೆ ಮಾಡಬೇಕಿದೆ, ಒಗ್ಗಟ್ಟಿನಿಂದ ಎಲ್ಲವೂ ಸಾಧ್ಯವಿದೆ, ನಮ್ಮ ಕೂಗು ಸರ್ಕಾರಕ್ಕೆ ತಲುಪಿಸಲು ಒಂದಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಂದ್ರ ಜಲ್ದಾರ್ ಮಾತನಾಡಿ,ಹಿಂದುಳಿದಿರುವ ಕಾಟಿಕಾ ಸಮಾಜ ಸಂಘಟಿತರಾಗಿ ಮುಖ್ಯವಾಹಿನಿಗೆ ಬರಬೇಕಿದೆ. ಜಯಂತಿಗಳೊAದಿಗೆ ಸಮಾಜ ಒಗ್ಗಟ್ಟಿನಿಂದ ಸೌಲಭ್ಯ ಪಡೆಯಬೇಕೆಂದರು.
ಆರ್‌ಡಿಎ ಸದಸ್ಯ ನರಸಿಂಹಲು ಮಾಡಗಿರಿ ಮಾತನಾಡಿದರು.
ಈ ಸಂದರ್ಭದಲ್ಲಿ ಸೂರ್ಯವಂಶ ಕಾಟಿಕ ಸಮಾಜದ ಜಿಲ್ಲಾಧ್ಯಕ್ಷ ಶಿವಶಂಕರ ನಿಜಾಮಕಾರಿ, ಪ್ರಧಾನ
ಕಾರ್ಯದರ್ಶಿ ನಾಗೇಶ ಜಗತ್ಕಾರಿ, ಗೌರವಾಧ್ಯಕ್ಷ ಸತ್ಯ ನಾರಾಯಣ ರಾವ್ ಕಲ್ಯಾಣಕಾರಿ, ಕಿಷನರಾವ್, ಮುರುಳಿಕೃಷ್ಣ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.