ಹೂತಗೆರೆಯಲ್ಲಿ ಶ್ರೀ ಬೋರೇದೇವರ ಕೊಂಡೋತ್ಸವ

01M.D.R.1
ಮದ್ದೂರು ತಾಲೂಕಿನ ಹೂತಗೆರೆ ಗ್ರಾಮದ ಶ್ರೀ ಬೋರೇದೇವರ ಕೊಂಡೋತ್ಸವದ ಅಂಗವಾಗಿ ಗ್ರಾಮದಲ್ಲಿ ದೇವರ ಮೆರವಣಿಗೆ ನಡೆಯಿತು.
Published on

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಹೂತಗೆರೆ ಗ್ರಾಮದ ಶ್ರೀ ಬೋರೇದೇವರ ಕೊಂಡೋತ್ಸವ ಸೋಮವಾರ ಮುಂಜಾನೆ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.

ದೇಗುಲದ ಆವರಣದಲ್ಲಿ ದೇವರ ಪಟ ಹೊತ್ತ ಅರ್ಚಕ ನಿಗಿನಿಗಿ ಕೆಂಡದ ಮೇಲೆ ಕೊಂಡ ಹಾಯ್ದರು. ಈ ವೇಳೆ ಭಕ್ತರ ಉದ್ಘೋಷ ಮುಗಿಲು ಮುಟ್ಟಿತ್ತು. ಸಹಸ್ರಾರು ಭಕ್ತಾದಿಗಳು ಕೊಂಡೋತ್ಸವಕ್ಕೆ ಸಾಕ್ಷಿಯಾದರು. ಕೊಂಡೋತ್ಸವದ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕೊಂಡೋತ್ಸವಕ್ಕೆ ಹೂತಗೆರೆ ಸೇರಿದಂತೆ ಕದಲೀಪುರ, ದುಂಡನಹಳ್ಳಿ, ಹೆಬ್ಬೆರಳು. ಸೀನಪ್ಪನದೊಡ್ಡಿ, ರಾಮನಗರ, ಆಲೆಮರೆದೊಡ್ಡಿ, ಬೂರುಮಾರದೊಡ್ಡಿ, ತಿಮ್ಮೇಗೌಡನದೊಡ್ಡಿ, ಹೆರಳ್ಳಿ, ಕಾಡುಬೋರನಹಳ್ಳಿ, ಬೈರಾಪಟ್ಟಣ, ಮುದ್ದಯ್ಯನಪಾಳ್ಯ ಹಲವಾರು ಗ್ರಾಮಸ್ಥರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಒಳಗಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net