ಸಂಭ್ರಮದ ಶ್ರೀ ಮಹಾಗಣಪತಿ ಜಾತ್ರೋತ್ಸವ

16bnk2
ಜಾವಳಿಯ ಹೇಮಾವತಿ ನದಿ ಮೂಲದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಬಣಕಲ್: ಜಾವಳಿಯ ಹೇಮಾವತಿ ನದಿ ಮೂಲದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಾತ್ರೆ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶ್ರೀಮಹಾಗಣಪತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯೇ ದೇವಸ್ಥಾನದಲ್ಲಿ ವಿಶೇಷ ಹೋಮ, ಹವನ ನಡೆಯಿತು. ಭಕ್ತರು ಪೂಜೆ ಸಲ್ಲಿಸಿದರು. ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಪಲ್ಲಕ್ಕಿಯನ್ನು ದೇವಸ್ಥಾನದ ದ್ವಾರದಿಂದ ಮಂಜಿನಕಟ್ಟೆವರೆಗೆ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿ ಮಂಜಿನಕಟ್ಟೆಯಲ್ಲಿ ಪೂಜೆ ಸಲ್ಲಿಸಿ ನಂತರ ದೇವಾಲಯಕ್ಕೆ ಕರೆತರಲಾಯಿತು.
ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರವೀಣ್ ಎ.ಗುರ್ಜರ್ ಹಾಗೂ ಯಶವಂತ್ ಆರ್.ಗುರ್ಜರ್, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಕಾರ್ಯದರ್ಶಿ ಎಂ.ವಿ.ಜಗದೀಶ್ ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಗಣಪತಿ ಆಚಾರ್, ಗ್ರಾಪಂ ಅಧ್ಯಕ್ಷ ಎಂ.ಪಿ.ಪ್ರದೀಪ್, ಉಪಾಧ್ಯಕ್ಷ ಮನೋಹರ್, ಶಶಿಧರ್, ಎಂ.ವಿ.ಚನ್ನಕೇಶವೇಗೌಡ, ಪರೀಕ್ಷಿತ್‌ಜಾವಳಿ, ರವಿ ಮಲೆಮನೆ, ಸುಧೀರ್, ಮೇಗೂರು ಉಮೇಶ್, ಬಿ.ಜಿ.ಶ್ರೀನಾಥ್, ಬಿ.ಎಸ್.ಸುರೇಶ್, ಸಂಪತ್, ಶಶಿಕುಮಾರ್, ಸತೀಶ್ ಬಾಳೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net