ಶ್ರೀಕೃಷ್ಣ ದೇವರಾಯರ ಜಯಂತಿ ಆಚರಣೆ

Celebration of Shri Krishna Deva Raya Jayanti
Published on

ಹಿರೇಕೆರೂರ: ಪಟ್ಟಣದ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ವಿಜಯನಗರ ಸಾಮ್ರಾಜ್ಯ ಆಳಿದ ಶ್ರೇಷ್ಠ ದೊರೆ ಶ್ರೀಕೃಷ್ಣ ದೇವರಾಯರ ಜಯಂತಿ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಬಿ. ಚನ್ನಗೌಡ್ರ ಮಾತನಾಡಿ, ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯ ಆಳಿದ ಕೃಷ್ಣದೇವರಾಯರು, ಈ ನಾಡಿನ ಅತ್ಯಂತ ಶ್ರೇಷ್ಠ ದೊರೆಗಳಾಗಿದ್ದು, ಅವರ ಅಧಿಕಾರ ಅವಧಿಯಲ್ಲಿ ಸಾಹಿತ್ಯ, ಧರ್ಮ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದ ಸುವರ್ಣಯುಗವಾಗಿದೆ. ಶ್ರೇಷ್ಠ ದೊರೆಗಳ ಜಯಂತಿ ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು.

ಉಪನ್ಯಾಸಕರಾದ ಎಸ್.ಎಸ್. ಹುಲ್ಲಿನಕೊಪ್ಪ, ಎಚ್.ಪಿ. ನಾಗರಾಜ, ಸಿ.ಆರ್. ದೂದೀಹಳ್ಳಿ, ಚಂದ್ರಗೌಡ ಆರ್., ಅಶೋಕ ಬಡಿಗೇರ, ಎಂ.ಎಸ್. ಪತ್ತಾರ, ವಿರೂಪಾಕ್ಷಪ್ಪ ಎಸ್.ಕೆ., ಪ್ರಶಾಂತ ಎಂ., ಸರಿತಾ ಸಂಕದಾಳ, ಅಂಬಿಕಾ ಕರಡಿ, ಸಾವಿತ್ರಮ್ಮ ಬಿ. ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net