ಪಂಡಿತ ದೀನ ದಯಾಳ ಉಪಾಧ್ಯಾಯರ ಜನ್ಮ ದಿನ ಆಚರಣೆ

DEENDAYAL UPADHYAYA
ವಿಜಯಪುರದ ವಾರ್ಡ್ ನಂ. 35 ರಲ್ಲಿ ಬಿಜೆಪಿ ನಗರ ಘಟಕದಿಂದ ಪಂಡಿತ ದೀನ ದಯಾಳ ಉಪಾಧ್ಯಾಯರ ಜನ್ಮ ದಿನ ಆಚರಿಸಲಾಯಿತು. ಪ್ರಕಾಶ ಅಕ್ಕಲಕೋಟ, ವಿವೇಕನಂದ ಡಬ್ಬಿ, ರಾಜಶೇಖರ ಕುರಿಯವರ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ವಾರ್ಡ್ ನಂ. 35 ರಲ್ಲಿ ಬಿಜೆಪಿ ನಗರ ಘಟಕದಿಂದ ಸೋಮವಾರ ಪಂಡಿತ ದೀನ ದಯಾಳ ಉಪಾಧ್ಯಾಯರ ಜನ್ಮ ದಿನ ಆಚರಿಸಲಾಯಿತು.

ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ಅಂತ್ಯೋದಯ ಪರಿಕಲ್ಪನೆ ಹರಿಕಾರ ಪಂಡಿತ ದೀನ ದಯಾಳರು ಒಬ್ಬ ಉದಾತ್ತ ಆದರ್ಶವ್ಯಕ್ತಿ, ಪ್ರಚಂಡ ಸಂಘಟನಾ ಸಾಮರ್ಥ್ಯ ಹೊಂದಿದವರಾಗಿದ್ದರು. ಅವರು ಕೇವಲ ವ್ಯಕ್ತಿಯಾಗಿರದೇ ಪ್ರತಿಯೊಂದು ರಂಗದಲ್ಲೂ ಅತ್ಯದ್ಭುತ ಪ್ರತಿಭೆಯನ್ನು ಹೊಂದಿದ್ದರು. ಅವರು ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ, ರಾಜಕಾರಣಿ, ಬರಹಗಾರ ಮುಂತಾದ ಗುಣಗಳ ಆಕರವಾಗಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿರುವ ಪಂಡಿತ ದೀನ್ ದಯಾಳ ಉಪಾಧ್ಯಾಯ ಅವರ ಅನೇಕ ವಿಚಾರಧಾರೆಗಳು ಕಾರ್ಯಕರ್ತರಿಗೆ ಪ್ರೇರಣೆಯಾಗಿವೆ ಎಂದರು.

ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕನಂದ ಡಬ್ಬಿ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ, ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ, ರಾಜೇಶ ತಾವಸೆ, ಸಂತೋಷ ಪಾಟೀಲ, ವಿಠ್ಠಲ ನಡುವಿನಕೇರಿ, ಶಂಕರ ಹೂಗಾರ, ವಿಜಯ ಹಿರೇಮಠ, ಸುಶ್ಮಿತ ವಾಂಡಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net