ಸಂಭ್ರಮದ ನಾಗರಪಂಚಮಿ ಆಚರಣೆ

Celebration of Nagar Panchami
ವಿಜಯಪುರ ನಗರದ ಮದ್ದಿನಕಣಿ ಪ್ರದೇಶದಲ್ಲಿ ಶರಣಪಡೆಯ ಲಿಂಗಾಯಿತ ಜಾಗರಣ ವೇದಿಕೆ ಸದಸ್ಯರು, ಸೋಮವಾರ ನಾಗರ ಪಂಚಮಿ ಹಿನ್ನೆಲೆಯಲ್ಲಿ. ಕಲ್ಲು ನಾಗರ ಬದಲು ಮಕ್ಕಳಿಗೆ ಹಾಲು ಕುಡಿಸಿದರು. ಶರಣಪಡೆ ಲಿಂಗಾಯಿತ ಜಾಗರಣ ವೇದಿಕೆ ಅಧ್ಯಕ್ಷ ಕೆ.ಆರ್. ಕಡೇಚೂರ, ಮೀನಾಕ್ಷಿ ಶೆಟ್ಟರ್ ಇದ್ದರು.
Published on

ವಿಜಯಪುರ: ನಗರದ ವಿವಿಧೆಡೆ ಸಂಭ್ರಮದ ನಾಗರಪಂಚಮಿ ಆಚರಿಸಲಾಯಿತು. ಭಾನುವಾರ ಮನೆಯಲ್ಲಿ ನಾಗರ ಬೆಳ್ಳಿ ಮೂರ್ತಿಗೆ ಹಾಲು ಎರೆದು ಮಹಿಳೆಯರು ಪೂಜೆ ಸಲ್ಲಿಸಿದರು. ಸೋಮವಾರ ತಮ್ಮ ಕಾಲೋನಿಯ ಸಮೀಪದ ದೇವಸ್ಥಾನಕ್ಕೆ ತೆರಳಿ ಕಲ್ಲು ನಾಗರ ಮೂರ್ತಿ ಪೂಜೆ ಸಲ್ಲಿಸಿದರು.

ಬೆಳಗ್ಗೆಯಿಂದ ಮಹಿಳೆಯರು ಹೊಸ ಬಟ್ಟೆ ತೊಟ್ಟಿದ್ದರೆ, ಹೆಣ್ಣು ಮಕ್ಕಳು ಸಹ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದದರು. ಪ್ರತಿ ವರ್ಷ ನಾಗರಪಂಚಮಿಗೆ ವಿವಿಧ ಸಿಹಿ ತಿಂಡಿ ಮಾಡಿ, ತಮ್ಮ ಸ್ನೇಹಿತರ, ತಮ್ಮ ಕುಟುಂಬದ ಸದಸ್ಯರಿಗೆ ವಿತರಿಸಿದರು.

ವಿಜಯಪುರದ ನಗರದ ಮದ್ದಿನ ಕಣಿ ಹತ್ತಿರುವ ಶರಣಪಡೆ ಲಿಂಗಾಯಿತ ಜಾಗರಣ ವೇದಿಕೆ ವತಿಯಿಂದ ಕಲ್ಲು ನಾಗರ ಬದಲು ಮಕ್ಕಳಿಗೆ ಹಾಲು ಕುಡಿಸಿ ಕೆಲವು ಕಡೆ ನಾಗರಪಂಚಮಿ ಆಚರಿಸಿದರು.

ಇದೇ ವೇಳೆ ವೇದಿಕೆಯ ಅಧ್ಯಕ್ಷ ಕೆ.ಆರ್. ಕಡೇಚೂರ ಮಾತನಾಡಿ, 12ನೇ ಶತಮಾನದಲ್ಲಿಯೇ ಮೂಢನಂಬಿಕೆ ಹೋಗಲಾಡಿಸಲು ಅಣ್ಣ ಬಸವಣ್ಣ ಧ್ವನಿ ಎತ್ತಿದ್ದರು. ಕಲ್ಲು ನಾಗರ ಹಾಲು ಕುಡಿಯುವದಿಲ್ಲ ಎಂದು ತಮ್ಮ ವಚನ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದರು ಎಂದು ಪ್ರಕರಣಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net