ಸಾಮಾಜಿಕ ಜಾಲತಾಣದ ದಾಸರಾಗಬೇಡಿ : ಹಿಳ್ಳೆಮನೆ ಸುಬ್ರಹ್ಮಣ್ಯ ಪ್ರಸಾದ್ ಸಲಹೆ

New Project (29)
Published on

ಕುಂಬಳೆ: ಮುಜುಂಗಾವು ಶ್ರೀ ಭಾರತಿ ವಿದ್ಯಾಪೀಠದಲ್ಲಿ ಪ್ರತಿಭಾ ಭಾರತಿ ಕಾರ್ಯಕ್ರಮವನ್ನುಮಂಗಳವಾರ ಮಕರ ಸಂಕ್ರಾಂತಿಯ ಆಚರಣೆಯೊಂದಿಗೆ ನಡೆಸಲಾಯಿತು.

ವಿಶೇಷ ಅತಿಥಿಗಳಾಗಿ ಆಗಮಿಸಿದ ವಿದ್ಯಾಲಯದ ನೂತನ ಆಡಳಿತ ಸಮಿತಿಯ ಕಾರ್ಯದರ್ಶಿ ಹಿಳ್ಳೆಮನೆ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ದಾಸರಾಗದೆ, ಪರೀಕ್ಷಾ ದೃಷ್ಟಿಯಿಂದಲೂ ಓದಬೇಕಾದ ಅನಿವಾರ್ಯತೆ ಇದೆ ಎಂದರು. ಮಕರ ಸಂಕ್ರಾಂತಿಯ ವಿಶೇಷವಾಗಿ ಎಳ್ಳು-ಬೆಲ್ಲವನ್ನು ಹಂಚಿ, ವಿದ್ಯಾರ್ಥಿಗಳಿಗೆ ಆಚರಣೆಯ ವಿಶೇಷತೆ ವಿವರಿಸಲಾಯಿತು.

ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಹತ್ತನೇ ತರಗತಿಯ ವರುಣ್ ಶೌರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಶಿಕ್ಷಕ ಶ್ಯಾಮ್ ಭಟ್ ದರ್ಭೆ ಮಾರ್ಗ ಹಾಗೂ ಸಹ ಮುಖ್ಯಶಿಕ್ಷಕಿ ಚಿತ್ರಾ ಸರಸ್ವತಿ ಹಾಗೂ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ ಅನಂತಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐದನೇ ತರಗತಿಯ ಆರಾಧ್ಯ ಕೆ.ಎನ್. ಸ್ವಾಗತಿಸಿದರು. ಒಂಬತ್ತನೇ ತರಗತಿಯ ಅಕ್ಷರಾ ಎಂ.ಬಲ್ಲಾಳ್ ವಂದಿಸಿದರು. ಎಂಟನೇ ತರಗತಿಯ ಶಾಶ್ವತ್ ಹಾಗೂ ಚಿತ್ತಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net