ಸಂಭ್ರಮದ ಕುಮಾರೇಶ್ವರ ಮಹಾರಥೋತ್ಸವ

04 NRL-1
Published on

ನರೇಗಲ್ಲ: ಸಮೀಪದ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದಲ್ಲಿ ಸೋಮವಾರ ಶ್ರೀ ಕುಮಾರೇಶ್ವರ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಯಲಬುರ್ಗಾ ತಾಲೂಕು ಬಿನ್ನಾಳ ಗ್ರಾಮದಿಂದ ತೇರಿನ ಕಳಸ ಹಾಗೂ ಮುಧೋಳ ಗ್ರಾಮದಿಂದ ಪಲ್ಲಕ್ಕಿ ಹಾಗೂ ನಂದಿಕೋಲ ಮತ್ತು ಮಾರನಬಸರಿ ಗ್ರಾಮದಿಂದ ರಥದ ಹಗ್ಗವನ್ನು ಸಲಕ ವಾದ್ಯ, ವೃಂದದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ರಥೋತ್ಸವಕ್ಕೆ ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಭಕ್ತರು ಕುಮಾರೇಶ್ವರ ಮಹಾರಾಜ ಕೀ ಜೈ, ಚನ್ನಬಸವೇಶ್ವರ ಮಹಾರಾಜ ಕೀ ಜೈ, ಶಿವಬಸವ ಮಹಾರಾಜಕೀ ಜೈ, ಹರಹರ ಮಹಾದೇವ ಎಂಬ ಘೋಷಣೆ ಕೂಗುತ್ತ ರಥೋತ್ಸವದಲ್ಲಿ ಭಾಗಿಯಾದರು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹರ್ಲಾಪೂರ ಶ್ರೀ ಕೊಟ್ಟೂರೇಶ್ವರ ಮಠದ ಡಾ. ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ, ಚಂದ್ರಶೇಖರ ದೇವರು, ಹರಗುರುಚರಮೂರ್ತಿಗಳು ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net