ಬೆಟ್ಟದಪುರದಲ್ಲಿ ಕೆಂಪೇಗೌಡ ಜಯಂತ್ಯುತ್ಸವದ ಸಂಭ್ರಮ

11BTP06
ಬೆಟ್ಟದಪುರದಲ್ಲಿ ನಾಡಪ್ರಭು ಕೆಂಪೇಗೌಡ ಸ್ನೇಹ ಬಳಗದ ವತಿಯಿಂದ ಗುರುವಾರ ಆಯೋಜಿಸಿದ್ದ 515ನೇ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಪ್ರಯುಕ್ತ ಬೆಳ್ಳಿ ರಥದಲ್ಲಿ ಕೆಂಪೇಗೌಡರ ಪ್ರತಿಮೆ ಇರಿಸಿ ಮೆರವಣಿಗೆ ಮಾಡಲಾಯಿತು. ದೇವರಾಜು, ನಾರಾಯಣಗೌಡ, ಗೋವಿಂದೇಗೌಡ, ಮಹೇಶ್, ಚೇತನ್, ಮಂಜಣ್ಣ, ನಾಗರಾಜ್, ವೆಂಕಟೇಶ್, ಚಂದ್ರೇಗೌಡ, ನಾಗೇಗೌಡ ಇತರರಿದ್ದರು.
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಾಡಪ್ರಭು ಕೆಂಪೇಗೌಡರ ಸ್ನೇಹ ಬಳಗದ ವತಿಯಿಂದ ಗುರುವಾರ ಆಯೋಜಿಸಿದ್ದ 515ನೇ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳ್ಳಿ ರಥದ ಮೇಲೆ ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ನೃತ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ಯುವಕರು ಹಾಗೂ ಮುಖಂಡರು ಡಿ.ಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಶಿಕ್ಷಕ ನಾರಾಯಣಗೌಡ ಮಾತನಾಡಿ, ಕೆಂಪೇಗೌಡರು ದೂರದೃಷ್ಟಿಯ ನಾಯಕರಾಗಿದ್ದರು. ಅವರ ಕಾರ್ಯಗಳು ಇಂದಿಗೂ ರಾಜ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿವೆ. ಅವರನ್ನು ಬೆಂಗಳೂರಿನ ನಿರ್ಮಾತೃ ಎಂದು ಗೌರವಿಸಲಾಗುತ್ತದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ರೈತ ಮುಖಂಡ ದೇವರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಸಾಧನೆಗಳು ಕರ್ನಾಟಕದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ. ಅವರ ದೂರದೃಷ್ಟಿ, ನಾಯಕತ್ವ ಮತ್ತು ಸಮರ್ಪಣೆಯು ಬೆಂಗಳೂರನ್ನು ಭಾರತದ ಪ್ರಮುಖ ಮಹಾನಗರಗಳಲ್ಲಿ ಒಂದನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಲ್ಲದೆ ಅವರಿಗೆ ಕೃಷಿಯಲ್ಲಿ ಇದ್ದ ಪ್ರೀತಿ ಇಂದಿಗೂ ಅನುಕರಣೆಯಾಗುತ್ತಿರುವುದು ವಿಶೇಷ ಎಂದರು.

ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಳಿರು-ತೋರಣಗಳಿಂದ ಸಿಂಗರಿಸಿ, ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಮುಖಂಡರಾದ ನಾರಾಯಣಗೌಡ, ಗೋವಿಂದೇಗೌಡ, ಮಹೇಶ್, ನಟರಾಜ್, ಮಂಜಣ್ಣ ಸಾಲಿಗ್ರಾಮ, ಚೇತನ್, ನಾಗರಾಜ್, ವೆಂಕಟೇಶ್, ಮಾಸ್ಟರ್ ಚಂದ್ರೇಗೌಡ, ನಾಗೇಗೌಡ , ರಾಜು, ಕುಮಾರ್ ಕೃಷ್ಣೇಗೌಡ, ನಾಗರಾಜು, ಗೋವಿಂದೇಗೌಡ, ಶಿವಣ್ಣಗೌಡ, ದೇವರಾಜ, ಬಿ.ಜೆ ದೇವರಾಜು, ಉದಯ್, ಚಂದ್ರು, ಗಿರಿಗೌಡ, ಹೊನ್ನೇಗೌಡ, ನಂದೀಶ, ಶರತ್, ಕಾರ್ತಿಕ್, ಉಮೇಶ್, ಮಹೇಶ್, ಗೋಪಾಲ, ಯೋಗೇಶ, ರಾಜೇಗೌಡ, ಕೆಂಗಪ್ಪ, ಪ್ರವೀಣ್, ಪ್ರತಾಪ, ಕೃಷ್ಣ, ವಿನೋದ, ಆದಿ, ಮನು, ರಾಮೇಗೌಡ, ಗಣೇಶ, ರಾಜೇಶ್, ವಿನಯ್, ರಘು, ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net