

ಹುಬ್ಬಳ್ಳಿ : ನಗರದ ವಿವಿಧೆಡೆ ಗುರುವಾರ 78ನೇ ಸ್ವಾತಂತ್ರ್ಯ ದಿನವನ್ನು ವಿಜೃಂಬಣೆಯಿಂದ ಆಚರಿಸಲಾಯಿತು.
ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆವರಣದಲ್ಲಿ ಕುಲಪತಿ ಡಾ. ಸಿ. ಬಸವರಾಜು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಸಿಂಡಿಕೇಟ್ ಸದಸ್ಯರಾದ ಎಸ್.ಎನ್. ಪರಾಂಡೆ, ಡಾ. ಎಚ್. ವಿ. ಬೆಳಗಲಿ, ಆಡಳಿತಾಂಗದ ಕುಲಸಚಿವರಾದ ಅನುರಾಧ ವಸ್ತ್ರದ ಹಾಗೂ ಇತರರು ಉಪಸ್ಥಿತರಿದ್ದರು.
ಗಬ್ಬೂರು ಕ್ರಾಸ್ನಲ್ಲಿನ ಕೆಎಲ್ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಜೆಜಿಎಂಎಂ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಗ್ರೂಪ್ ಕ್ಯಾಪ್ಟನ್ ಡಾ. ಬೀಮಪ್ಪ ಬರಾಕೋಳ ಧ್ವಜಾರೋಹಣ ನೆರವೇರಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಕರ್ನಲ್ ಡಾ. ಅರುಣಕುಮಾರ ಮಲ್ಲಜ್ಯೋಸುಲ್ಲಾ, ಶೃತಿ ಭಸ್ಮೆ ಹಾಗೂ ಇತರರು ಇದ್ದರು.
ವಾಯವ್ಯ ಸಾರಿಗೆ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ.ಎಂ, ಧ್ವಜಾರೋಹಣ ನೆರವೇರಿಸಿದರು. 2023-24 ನೇ ಸಾಲಿನಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಹಾಗೂ ವಿಶೇಷ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ಪ್ರದಾನ ಮಾಡಿ, ಅಭಿನಂದಿಸಲಾಯಿತು. ಪಿ.ಆರ್.ಕಿರಣಗಿ, ವಿವೇಕಾನಂದ ವಿಶ್ವಜ್ಞ, ಪಿ.ವೈ.ನಾಯಕ, ವಿಜಯಶ್ರೀ ನರಗುಂದ, ಗಣೇಶ ರಾಠೋಡ, ಬಸವರಾಜ ಅಮ್ಮನ್ನವರ ಹಾಗೂ ಇತರರು ಹಾಜರಿದ್ದರು.
ಐಇಎಂಎಸ್ ಎಂಬಿಎ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಪ್ರಾಚಾರ್ಯ ಡಾ. ಚಿದಾನಂದ ಬಡಿಗೇರ ಹಾಗೂ ಇತರರು ಉಪಸ್ಥಿತರಿದ್ದರು.
ಮಹೇಶ ಕಾಲೇಜ್ : ನಗರದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ನಲ್ಲಿರುವ ಡಾ.ಆರ್.ಬಿ.ಪಾಟೀಲ ಮಹೇಶ ಪಿ.ಯು. ಕಾಲೇಜಿನಲ್ಲಿ 78ನೇ ಸ್ವಾತಂತ್ರೋತ್ಸವ ದಿನ ಆಚರಿಸಲಾಯಿತು. ಎನ್.ಎಲ್.ಇ. ಸೊಸೈಟಿಯ ಚೇರ್ಮನ್ ಡಾ.ಪಿ.ವಿ. ದತ್ತಿ ಧ್ವಜಾರೋಹಣ ನೇರವೇರಿಸಿದರು. ಸೊಸೈಟಿ ಕಾರ್ಯದರ್ಶಿ ಆರ್.ಎನ್ .ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞ ನಿವೃತ್ತ ಡಿಡಿಪಿಐ ಶಿವಶಂಕರ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ರಂಗಭೂಮಿ ಕಲಾವಿದೆ ವೀಣಾ ಅಠವಲೆ ಅತಿಥಿಯಾಗಿದ್ದರು. ಪ್ರಾಚಾರ್ಯ ರಾಮ್ೋಹನ್ ಎಚ್.ಕೆ., ಉಪ ಪ್ರಾಚಾರ್ಯ ರಮೇಶ ಹೊಂಬಾಳೆ ಹಾಗೂ ಮತ್ತಿತರರು ಇದ್ದರು.
ದೇಶಪಾಂಡೆನಗರದ ಎನ್ಇಎಸ್ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಸ್ವಾತಂತ್ರೊ್ಯೕತ್ಸವದ ಅಂಗವಾಗಿ ಫ್ಯಾನ್ಸಿ ಡ್ರೆಸ್, ಗ್ರೀಟಿಂಗ್ ಕಾರ್ಡ್ ಮೇಕಿಂಗ್ ಸ್ಪರ್ಧೆ, ಟೀ ಶರ್ಟ್ ಪೇಂಟಿಂಗ್ ಸ್ಪರ್ಧೆ, ಪೋಷಕರಿಗೆ ಗಾಯನ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹಳೇಹುಬ್ಬಳ್ಳಿ ಅರವಿಂದನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯವರಿಗೆ ಮಹಾಭಿಷೇಕ ಮಾಡಿ, ವಿಶೇಷವಾಗಿ ಭಾರತಮಾತೆ ರೂಪದಲ್ಲಿ ದೇವಿಯರನ್ನು ಅಲಂಕರಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಸಂಸ್ಥಾಪಕರಾದ ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕರಾದ ಮಾದೇವಪ್ಪ ಬೀರಣ್ಣವರ, ಶಿವಾಜಿ ಗಾಂವಕರ ಅತಿಥಿಗಳಾಗಿದ್ದರು. ಹಿರಿಯರಾದ ತೋಟಪ್ಪಾ ನಿಡಗುಂದಿ, ಮಹೇಶ ದಾಬಡೆ, ರಾಜಶ್ರೀ ಜಡಿ, ಸಂಜು ಬುಗಡಿ, ವಿಠ್ಠಲ ಏಕಬೋಟೆ, ವಿರುಪಾಕ್ಷ ಚಲವಾದಿ, ಶ್ರೀಧರ ಕನಮಕಲ್, ಗುರು ಬನ್ನಿಕೊಪ್ಪ, ರಾಜು ತಾಂಬೆ, ಅರುಣಕುಮಾರ ಹೆಬ್ಬಳ್ಳಿ, ಪ್ರಕಾಶ ಅರಗಂಜಿ, ಮನೋಹರ ಕಳಸಕರ, ಪರಶುರಾಮ ಸುಳ್ಳದ, ಬಂಗಾರಪ್ಪ ಸಜ್ಜನಗೌಡ್ರ, ಇಸ್ಮಾಯಿಲಸಾಬ್ ಲಂಗೋಟಿ ಹಾಗೂ ಇತರರು ಉಪಸ್ಥಿತರಿದ್ದರು.
ಜೆ.ಕೆ. ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ನಲ್ಲಿ ನಿವೃತ್ತ ಸೇನಾಧಿಕಾರಿ ಟಿ. ಶಂಕರ ಧ್ವಜಾರೋಹಣ ನೆರವೇರಿಸಿದರು. ಜೆ.ಕೆ. ಎಜ್ಯುಕೇಶನ್ ಸೊಸೈಟಿ ಚೇರ್ಮನ್ ಜಗದೀಶ ಕಲ್ಯಾಣಶೆಟ್ಟರ್, ಮುಖ್ಯೋಪಾಧ್ಯಾಪಕಿ ಸ್ಮೀತಾ ವೆರ್ಣೆಕರ ಹಾಗೂ ಇತರರು ಇದ್ದರು.
ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಟ್ರಸ್ಟ್ ಕಮೀಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಧ್ವಜಾರೋಹಣ ಮಾಡಿದರು. ಕಮೀಟಿ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಶಾಮಾನಂದ ಪೂಜೇರಿ, ಉದಯಕುಮಾರ ನಾಯ್ಕ, ಚನ್ನವೀರ ಮುಂಗುರವಾಡಿ, ಸಿದ್ದನಗೌಡ ಪಾಟೀಲ, ವಿನಾಯಕ ಘೊಡ್ಕೆ, ವಿ.ವಿ. ಮಲ್ಲಾಪೂರ, ಬಾಳು ಮಗಜಿಕೊಂಡಿ, ಮ್ಯಾನೇಜರ್ ಈರಣ್ಣ ತುಪ್ಪದ ಹಾಗೂ ಇತರರು ಇದ್ದರು.
ಬಿಜೆಪಿ : ಅರವಿಂದ ನಗರದಲ್ಲಿರುವ ಮಹಾನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಧ್ವಜಾರೋಹಣ ನೆರವೇರಿಸಿದರು.
ಮಹಾಪೌರ ರಾಮಣ್ಣ ಬಡಿಗೇರ, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಿಗೆ, ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ದತ್ತಮೂರ್ತಿ ಕುಲಕರ್ಣಿ, ಪಾಲಿಗೆ ಸದಸ್ಯರಾದ ಶಿವು ಮೆಣಸಿನಕಾಯಿ, ಪ್ರೀತಿ ಲದ್ವಾ, ಉಮಾ ಮುಕುಂದ, ಶೀಲಾ ಕಾಡ್ಕರ್, ಸೀಮಾ ಲದ್ವಾ, ಅಕ್ಕಮ್ಮ ಹೆಗಡೆ ರಂಗಾ ಬದ್ದಿ ಸತೀಶ ಸೇಜವಾಡರ್ಕರ ಹಾಗೂ ಇತರರು ಪಾಲ್ಗೊಂಡಿದ್ದರು.