

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಪಾಂಡೇಶ್ವರ ಕ್ಯಾಂಪಸ್‌ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿಮಾತನಾಡಿ, ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರುವುದರಿಂದ ನಾವು ಅತ್ಯಂತ ಭಾಗ್ಯಶಾಲಿಗಳು, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಗೌರವವಾಗಿ ಮುಂದಿನ ಪೀಳಿಗೆಗೆ ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಪಣ ತೊಡಬೇಕು ಎಂದರು.
ಶ್ರೀನಿವಾಸ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಫ್ ಡೆವಲಪ್‌ಮೆಂಟ್ ಡಾ.ಅಜಯ್ ಕುಮಾರ್, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಮರ್ಸ್‌ನ ಡೀನ್ ಡಾ.ವೆಂಕಟೇಶ್ ಅಮೀನ್, ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಡೀನ್ ಡಾ. ರಾಜಶೇಖರ್ ಎಸ್., ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಮತ್ತು ಇನ್ಫಾರ್ಮಶನ್ ಸೈನ್ಸ್ ಡೀನ್ ಡಾ. ಸುಬ್ರಹ್ಮಣ್ಯ ಭಟ್, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಟೂರಿಸಂ ಡೀನ್ ಪ್ರೊ. ಪ್ರಶಾಂತ್ ಪ್ರಭು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಡೀನ್ ಡಾ.ಪದ್ಮನಾಭ ಬಿ. ಸ್ವಾಗತಿಸಿದರು, ಪ್ರೊ.ಸಾಗರ್ ಶ್ರೀನಿವಾಸ್ ವಂದಿಸಿದರು. ಕಾರ್ಯಕ್ರಮವನ್ನು ಪ್ರೊ.ಯಶಸ್ವಿ ನಿರೂಪಿಸಿದರು.