ಹಬ್ಬಗಳ ಆಚರಣೆ ಸಂಸ್ಕೃತಿಯ ಪ್ರತೀಕ

6 RPT 1
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಯುಗಾದಿ ಮತ್ತು ರಂಜಾನ್ ಅಂಗವಾಗಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಗುರಣ್ಣ ಹೆಬ್ಬಾಳ ಮಾತನಾಡಿದರು. ಆರ್.ಎ.ಚಾಬುಸಾಬ್, ಹಸನಬ್ಬ, ಹನ್ೀ, ಆರ್.ಎನ್.ಮಂಜುನಾಥ, ಸುಧೀಂದ್ರ ಪೂಜಾರಿ ಇತರರಿದ್ದರು.
Published on

ರಿಪ್ಪನ್‌ಪೇಟೆ: ಪ್ರಪಂಚದಲ್ಲಿ ವೈವಿಧ್ಯ ಸಂಸ್ಕೃತಿ ಆಚರಣೆ ಕಾಣುವ ದೇಶ ಭಾರತ ಮಾತ್ರ. ಬೇರೆ ಬೇರೆ ಧರ್ಮ, ಭಾಷೆ, ಆಚಾರ, ವಿಚಾರಗಳಿದ್ದರೂ ಸೌಹಾರ್ಧತೆ ಸಾಧಿಸಲಾಗುತ್ತಿದೆ. ವಿವಿಧ ಮತ ಪಂಥದ ಹಬ್ಬದ ಆಚರಣೆಗಳು ಸಂಸ್ಕೃತಿ ಪರಂಪರೆಯ ಪ್ರತೀಕ ಎಂದು ಹೊಸನಗರ ವೃತ್ತ ನೀರಿಕ್ಷಕ ಗುರಣ್ಣ ಹೆಬ್ಬಾಳ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯುಗಾದಿ ಮತ್ತು ರಂಜಾನ್ ಅಂಗವಾಗಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿ, ಮುಸ್ಲಿಮರು ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದು ಪದ್ಧತಿ. ವೈಜ್ಞಾನಿಕ ಕಾರಣ ಮತ್ತು ಸ್ವಯಂ ಅವಲೋಕನದ ದೃಷ್ಠಿಯಿಂದ ಆಚರಣೆಗಳನ್ನು ನಡೆಸಲಾಗುತ್ತದೆ. ಪಾಪ ಪುಣ್ಯ ವಿಶ್ಲೇಷಣೆ ಮಾಡಿಕೊಳ್ಳುವ ಕಾಲ ಎಂದು ತಿಳಿಸಿದರು.
ಜೀವನ ನಡೆಸಿದ ಅವಧಿಯಲ್ಲಿ ನಾವು ಮಾಡಿದ ಜನೋಪಯೋಗಿ ಕೆಲಸಗಳು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರು ಪರಸ್ಪರ ಸಹಬಾಳ್ವೆಯಿಂದ ಇರಬೇಕು. ಹಬ್ಬಗಳ ಆಚರಣೆಯೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಆರ್.ಎ.ಚಾಬುಸಾಬ್, ಹಸನಬ್ಬ, ಹನ್ೀ, ಆಸ್ೀ, ಆರ್.ಎನ್.ಮಂಜುನಾಥ, ಸುಧೀಂದ್ರ ಪೂಜಾರಿ, ಸುರೇಶ್ ಸಿಂಗ್, ಕೆರೆಹಳ್ಳಿ ರವೀಂದ್ರ, ಮಹಮ್ಮದ್ ರಫೀಕ್, ಶಫಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net