ಈದ್-ಉಲ್-ಫಿತರ್ ಆಚರಣೆ

11 yelandur 01
ಯಳಂದೂರು ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ನಿಮಿತ್ತ ಧರ್ಮಗುರು ಅಬ್ರಾರ್ ಅಹಮ್ಮದ್ ಪ್ರವಚನ ನೀಡಿದರು.
Published on

ಯಳಂದೂರು: ತಾಲೂಕಿನಾದ್ಯಂತ ಗುರುವಾರ ಮುಸ್ಲಿಮರು ಪವಿತ್ರ ರಂಜಾನ್(ಈದ್-ಉಲ್‌_ಫಿತರ್) ಅನ್ನು ಸಂಭ್ರಮ ಸಡಗರಗಳಿಂದ ಆಚರಿಸಿದರು.


ಪಟ್ಟಣದ ಜಾಮೀಯ ಮಸೀದಿ ಮುಂಭಾಗ ಬೆಳಗ್ಗೆ 9.30ಕ್ಕೆ ಮುಸ್ಲಿಮರು ಒಂದೆಡೆ ಸೇರಿ ಮೆರವಣಿಗೆ ಸಾಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-209ರ ಬಳಿಯ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚಿಣ್ಣರು ಬಣ್ಣಬಣ್ಣದ ಬಟ್ಟೆ ಧರಿಸಿ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.

ಜಾಮೀಯ ಮಸೀದಿಯ ಧರ್ಮಗುರು ಅಬ್ರಾರ್ ಅಹಮ್ಮದ್ ಹಬ್ಬ, ಉಪವಾಸದ ಮಹತ್ವ ಕುರಿತು ಪ್ರವಚನ ನೀಡಿದರು. ನಂತರ ಎಲ್ಲರೂ ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net