ನವಲಗುಂದದಲ್ಲಿ ಈದ್ ಮಿಲಾದ್ ಆಚರಣೆ

29-nvl-1 ED MILAD
Published on

ನವಲಗುಂದ: ಮಹಾತ್ಮರು ನಡೆದಾಡಿದ ಪುಣ್ಯಭೂಮಿಯಲ್ಲಿ ಹಜರತ್ ಮಹಮ್ಮದ್ ಪೈಗಂಬರರ ಜನ್ಮದಿನವನ್ನು ಸಿಹಿ ಹಂಚುವ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ಈದ್ ಮಿಲಾದ್ ಪ್ರಯುಕ್ತ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶರಬತ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಯನಗೌಡ ಪಾಟೀಲ ಮಾತನಾಡಿ, ಇಸ್ಲಾಂ ಧರ್ಮ ಸ್ಥಾಪಕರಾದ ಹಜರತ್ ಮಹಮ್ಮದ್ ಪೈಗಂಬರರ ಜನ್ಮದಿನವನ್ನು ಶರಬತ್ ಹಂಚುವ ಮೂಲಕ ಸರಳವಾಗಿ ಆಚರಿಸಿದ್ದು ಮಾದರಿಯಾಗಿದೆ ಎಂದರು.

ಇಮ್ತಿಯಾಜ್ ಮೌಲಾನಾ, ಅಂಜುಮನ್ ಸಂಸ್ಥೆ ಅಧ್ಯಕ್ಷ ಅಬ್ಬಾಸ್​ಅಲಿ ದೇವರಿಡು, ಉಪಾಧ್ಯಕ್ಷ ದಾವಲಸಾಬ್ ಮಸೂತಿ, ಕಾರ್ಯದರ್ಶಿ ರಿಯಾಜ್ ಅಹ್ಮದ್ ಪೀರಜಾದೆ, ಸುಲೇಮಾನ್ ನಾಶಿಪುಡಿ, ಪಿಎಸ್​ಐ ಜನಾರ್ದನ ಬಿ., ಡಾ. ಎಪಿಜೆ ಅಬ್ದುಲ್ ಕಲಾಂ ಅಭಿಮಾನಿಗಳ ಸಂಘದ ಅಧ್ಯಕ್ಷ ರಿಯಾಜ್​ಅಹ್ಮದ್ ನಾಶಿಪುಡಿ, ಸದಸ್ಯರಾದ ಮುನ್ನಾ ಕಲ್ಲಕುಟ್ರಿ, ಆಜಾದ್ ನಾಶಿಪುಡಿ, ಫಕ್ರದ್ದೀನ್ ಇಂಜಿನಿಯರ್, ಶಾನೂರ ಅಣ್ಣಿಗೇರಿ, ಬಾವೂಶಾ ಮಕಾಂದಾರ, ಇರ್ಫಾನ್ ಶಿರಸಂಗಿ, ಭಾಷಾಸಾಬ್ ಮಹಮ್ಮದನವರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net